ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕ್ರೀಡಾ ಕಿಟ್​ ವಿತರಿಸಲಾಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಬಸವರಾಜ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಕ್ರೀಡಾ ಇಲಾಖೆ ಅಧೀಕ್ಷಕ ಎಚ್​.ನಾಗರಾಜ, ವಿಷಯ ನಿರ್ವಾಹಕ ಬಿ.ಕೀರ್ತಿವರ್ದನ ಇದ್ದರು. 
ಜಿಲ್ಲೆ

ನಿತ್ಯ ಜೀವನದಲ್ಲಿ ಕ್ರೀಡೆಯೂ ಇರಲಿ, ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿಕೆ

ಕೊಪ್ಪಳ: ಮಕ್ಕಳು ವಿದ್ಯಾಭ್ಯಾಸ ಜತೆಗೆ ಕ್ರೀಡೆಯನ್ನೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇಜರ್​ ಧ್ಯಾನ್​ಚಂದ್​ 119ನೇ ಜನ್ಮ ದಿನ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಭವಿಷ್ಯದ ಪ್ರಜೆಗಳು. ಚೆನ್ನಾಗಿ ಅಭ್ಯಾಸ ಮಾಡಿ. ಕ್ರೀಡಾ ಚಟುವಟಕೆಗಳಲ್ಲಿ ಭಾಗವಹಿಸಿ. ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತನ್ನಿ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದಲ್ಲಿ ವಿವಿಧ ಇಲಾಖೆಗಳಲ್ಲಿ ಮೀಸಲಾತಿಯಡಿ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶವಿದೆ. ಎಲ್ಲ ಸೌಲಭ್ಯಗಳ ಸದುಪಯೋಗ ಪಡೆಯಿರಿ ಎಂದರು.

ವಾಲಿಬಾಲ್​ನಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕ್ರೀಡಾಪಟುಗಳಾದ ಇಂದುಮತಿ, ಶಿಲ್ಪಾ, ಭೂಮಿಕಾ, ಕಾವೇರಿ, ದೀತಾ, ಪವಿತ್ರಾ, ಅಥ್ಲೆಟಿಕ್​ಗಳಾದ ಪ್ರಮಿಳಾ, ಜಗದೀಶ, ನಂದನಕುಮಾರ, ಗೌತಮ, ಭರತ, ಪ್ಯಾರಾ ಅಥ್ಲೆಟ್​ ಗಂಗವ್ವ, ನೆಟ್​ಬಾಲ್​ ವಿಭಾಗದಲ್ಲಿ ಸೌಜನ್ಯ, ಶಿವಾನಿ, ಖೋಖೋದಲ್ಲಿ ಚನ್ನಬಸಪ್ಪ, ಕರಾಟೆಯಲ್ಲಿ ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಬಸವರಾಜ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಕ್ರೀಡಾ ಇಲಾಖೆ ಅಧೀಕ್ಷಕ ಎಚ್​.ನಾಗರಾಜ, ವಿಷಯ ನಿರ್ವಾಹಕ ಬಿ.ಕೀರ್ತಿವರ್ದನ, ಕ್ರೀಡಾ ವಸತಿ ನಿಯಲ ಕ್ರೀಡಾಪಟುಗಳು, ತರಬೇತುದಾರರು ಇದ್ದರು.