ಕೊಪ್ಪಳ, ನರೇಗಾ ಕಾಮಗಾರಿ, ಬೇಡಿಕೆ, ಮನೆ ಮನೆ ಭೇಟಿ ನೀಡಿ ಜಾಗೃತಿ, Koppal, Narega work, demand, door to door visit awareness, 
ಜಿಲ್ಲೆ

ಮನೆ ಮನೆ ಭೇಟಿ ಮೂಲಕ ಬೇಡಿಕೆ ಸ್ವೀಕಾರ

ಕೊಪ್ಪಳ: ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಮಂಗಳವಾರ ನರೇಗಾ ಕಾಮಗಾರಿ ಬೇಡಿಕೆಗಾಗಿ ಮನೆ ಮನೆ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ವಾತನಾಡಿ, ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ರೈತರ, ಕೂಲಿಕಾರರ, ಮಹಿಳೆಯರ ಸಬಲತೆಗಾಗಿ ಜಾರಿಯಾಗಿದೆ. ವರ್ಷದಲ್ಲಿ 100 ದಿನಗಳ ಕೆಲಸ ನಿರ್ವಹಿಸಬಹುದು. ಯೋಜನೆ ವಾಹಿತಿ, ಕಾಮಗಾರಿಗಳ ಕುರಿತು ಮನೆ ಮನೆ ಭೇಟಿ ಮೂಲಕ ಕುಟುಂಬಗಳಿಗೆ ವಾಹಿತಿ ನೀಡಲಾಗುತ್ತಿದೆ. ಗ್ರಾಪಂ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಬಹುದು. ಯಾವ ಕಾಮಗಾರಿ ಅವಶ್ಯವೆಂದು ಕೋರಿಕೆ ಪತ್ರ ಸಲ್ಲಿಸಿ ಎಂದರು.

ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ವಾತನಾಡಿ, ಗ್ರಾಮದಲ್ಲಿ ಮನೆ ಮನೆ ಭೇಟಿ ಮೂಲಕ ಯೋಜನೆಯ ಜಾಗತಿ ಮೂಡಿಸಲಾಗುತ್ತಿದೆ. ಬೇಡಿಕೆ ಪಡೆದ ಮೇಲೆ ಪ್ರತಿ ಗ್ರಾಮದಲ್ಲಿ ನಡೆಯುವ ವಾರ್ಡ್‌ಸಭೆ, ಗ್ರಾಮಸಭೆಯಲ್ಲಿ ಅನುಮೋದನೆಯೊಂದಿಗೆ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದರು. ಮನೆ ಮನೆ ಭೇಟಿ ಸಂದರ್ಭದಲ್ಲಿ ರೈತರು, ಮಹಿಳೆಯರಿಂದ ದನದಶೆಡ್, ಕುರಿಶೆಡ್, ಕೊಳಿ ಶೆಡ್, ಬದು ನಿರ್ವಾಣ ಸೇರಿ ಒಟ್ಟು 30 ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸ್ವೀಕರಿಸಲಾಯಿತು. ಡಿಇಒ ಮೌನೇಶ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಹಟ್ಟಿ ಹಾಜರಿದ್ದರು.

ಕೊಪ್ಪಳ ತಾಲೂಕಿನ ವಡ್ಡರಹಟ್ಟಿಯಲ್ಲಿ ಮಂಗಳವಾರ ನರೇಗಾ ಕಾಮಗಾರಿ ಬೇಡಿಕೆ ಸ್ವೀಕರಿಸಲಾಯಿತು. ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಡಿಇಒ ಮೌನೇಶ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಹಟ್ಟಿ ಇದ್ದರು.