ಕೊಪ್ಪಳ: ತಾಲೂಕಿನ ಮುನಿರಾಬಾದ್ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಪ್ರದೇಶದಲ್ಲಿ ಸಾರ್ವಜನಿಕ ರ್ನಿಬಂಧ ನಡುವೆಯೂ ಜೋಡಿಯೊಂಡು ಕಾರ್ ಸಮೇತ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಮುಖ್ಯ ಅಭಿಯಂತರ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ವಿವರಣೆ ಕೇಳಿದ್ದಾರೆ.
ಸಾಮಾನ್ಯವಾಗಿ ಗೇಟ್ ಭಾಗದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ರ್ನಿಬಂಧ ಇರಲಿದೆ. ಇನ್ನು 19ನೇ ಕ್ರಸ್ಟ್ ಗೇಟ್ ಕಳಚಿಕೊಂಡು ಅವಡ ನಡೆದಾಗಿನಿಂದ ಭದ್ರತೆ ಹೆಚ್ಚಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ. ಮುನಿರಾಬಾದ್ ಹಾಗೂ ಟಿಬಿ ಡ್ಯಾಂ ಪ್ರದೇಶ ಕಡೆಯಿಂದ ಪ್ರವೇಶ ದ್ವಾರವಿದ್ದು, 24 ಗಂಟೆಯೂ ಪೊಲೀಸರ ಕಾವಲಿರುತ್ತದೆ. ಸ್ಟಾಪ್ ಲಾಗ್ ಗೇಟ್ ಅಳವಡಿಸಿದ ನಂತರ ಹೊಸಪೇಟೆ ಮೂಲದ ಜೋಡಿಯೊಂದು ಕ್ರಸ್ಟ್ ಗೇಟ್ ಮೇಲ್ಭಾಗದಲ್ಲಿ ಫೋಟೋ ಶೂಟ್ ಮಾಡಿಕೊಂಡಿರುವುದು ಚರ್ಚೆಗೆ ಈಡಾಗಿದೆ.
ನಿಷೇಧದ ನಡುವೆಯೂ ಹೇಗೆ ತೆರಳಿ ಫೋಟೋ ತೆಗೆಸಿಕೊಂಡರು ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಯಾವಾಗ ಟನೆ ನಡೆದಿದೆ, ಯಾರು ಅನುಮತಿಸಿದವರು, ೋಟೋ ತೆಗೆಸಿಕೊಂಡವರು ಯಾರೆಂಬ ಮಾಹಿತಿ ಇಲ್ಲ. ಟನೆ ಕುರಿತು ಮುಖ್ಯ ಅಭಿಯಂತರ ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಇನ್ನು ಉತ್ತರಿಸಿಲ್ಲ ಎನ್ನಲಾಗಿದೆ.