ಜಿಲ್ಲೆ

ಬೆಂಗಳೂರು, ಹೈದ್ರಾಬಾದ್ ನಿಂದ ತಜ್ಞರ ತಂಡ ಆಗಮನ

Kopala - Raveendra V K

ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ ಗೇಟ್‌ 19ರಲ್ಲಿ ಚೈನ್‌ ಲಿಂಕ್‌ ತುಂಡಾಗಿದ್ದು, ಅದನ್ನು ಸರಿಪಡಿಸಲು ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ತಜ್ಞರ ತಂಡ ಬಂದಿದೆ ಎಂದು ಕೆಎನ್ ಎನ್ ಎಲ್ ತುಂಗಭದ್ರಾ ಯೋಜನಾ ವೃತ್ತದ ಸಿಇ ಎಲ್‌. ಬಸವರಾಜ ತಿಳಿಸಿದರು.

ಗೇಟ್ 19 ರ ಮೇಲಿನ ಒತ್ತಡ ಕಡಿಮೆ ಮಾಡಲು ಬಾಕಿ ಗೇಟ್ ಗಳಿಂದ ನೀರು ಹರಿಸಲಾಗುತ್ತಿದೆ. ತಜ್ಞರ ತಂಡ ನೀಡುವ ಸಲಹೆಯಂತೆ ಮುಂದಿನ ಕ್ರಮದ ಬಗ್ಗೆ ಯೋಜಿಸಲಾಗುವುದು ಪ್ರತಿವರ್ಷವೂ ಜಲಾಶಯದ ಗೇಟ್‌ಗಳ ನಿರ್ವಹಣೆ ಮಾಡಲಾಗುತ್ತದೆ. ಸುರಕ್ಷತೆಗೆ ಯಾವುದೇ ತೊಂದರೆಯಿಲ್ಲ. ಜಲಾಶಯ ಬಹುತೇಕ ಭರ್ತಿಯಾಗಿದೆ ಎಂದರು.