ಕೊಪ್ಪಳ: ಬಸ್ನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಕದ್ದ ಕಳ್ಳರು ಅದೇ ಮೊಬೈಲ್ನಲ್ಲಿನ ೋನ್ ಪೇ ಆ್ಯಪ್ ಬಳಸಿ 2.39 ಲಕ್ಷ ರೂ. ಎಗರಿಸಿದ್ದು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ ಶಂಕ್ರಪ್ಪ ಹಕ್ಕಂಡಿ ಬಸ್ನಲ್ಲಿ ಪ್ರಯಾಣಿಸುವಾಗ ಮೇ 15ರಂದು ಮೊಬೈಲ್ ಕಳೆದುಕೊಂಡಿದ್ದಾರೆ. ಮೊಬೈಲ್ನಲ್ಲಿ ತಮ್ಮ ಎಸ್ಬಿಐ ಬ್ಯಾಂಕ್ ಖಾತೆಗೆ ೋನ್ ಪೇ ಲಿಂಕ್ ಮಾಡಿದ್ದರು. ಅದರ ಮೂಲಕ ಡಿಜಿಟಲ್ ವಹಿವಾಟು ನಡೆಸುತ್ತಿದ್ದರು. ಮೊಬೈಲ್ ಕದ್ದವರು ೋನ್ ಪೇ ಆ್ಯಪ್ ಬಳಸಿ ಶಂಕ್ರಪ್ಪ ಖಾತೆಯಲ್ಲಿದ್ದ 2,39,097 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಮೇ 15ರಿಂದ 18ವರೆಗಿನ ಮೂರು ದಿನದಲ್ಲಿ ಹಣ ವರ್ಗಾವಣೆ ಆಗಿದೆ. ಈಬಗ್ಗೆ ಮಾಹಿತಿ ತಿಳಿಯುತ್ತಲೇ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.