ಜಿಲ್ಲೆ

ನಿರಾಶ್ರಿತರಿಗೆ ನಿವೇಶ ಹಂಚಿಕೆ

Kopala - Raveendra V K

ಕೊಪ್ಪಳ: ನಿರಾಶ್ರಿತರಿಗೆಲ್ಲ ಆಶ್ರಯ ಯೋಜನೆಯಡಿ ನಿವೇಶನ ನೀಡಲಾಗುವುದೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ತಾಲೂಕಿನ ಕಲ್​ ತಾವರಗೇರಾ ಗ್ರಾಮದಲ್ಲಿ ನಿವೇಶನ ರಹಿತರಿಗೆ ಮಂಗಳವಾರ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಸಿಎಂ ಆಶಯದಂತೆ ಗ್ರಾಮೀಣ ಆಶ್ರಯ ಯೋಜನೆಯಡಿ ಭೂಮಿ ಖರೀದಿಸಲಾಗಿದೆ. ಅರ್ಹರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಸದ್ಯ 135 ಜನರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಪ್ರಧಾನಮಂತ್ರಿಗಳ ಆಶಯದಂತೆ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲಾಗುವುದು. ವಿವಿಧ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಲಾಗುವುದೆಂದರು.

ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಪ್ರತಿಯೊಬ್ಬರಿಗೂ ಆಹಾರದಷ್ಟೇ ನಿವೇಶನವೂ ಮುಖ್ಯ. ಅರ್ಹರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ, ತಹಸೀಲ್ದಾರ್​ ವಿಠ್ಠಲ ಚೌಗಲಾ, ಗ್ರಾಪಂ ಅಧ್ಯಕ್ಷ ಗಂಗಪ್ಪ ನಾಯಕ, ಉಪಾಧ್ಯೆ ಶಾಹೀದ್​ ಬೇಗಂ, ಪಿಡಿಒ ಯಮನೂರಪ್ಪ ಕಬ್ಬಣ್ಣವರ, ಗ್ರಾಪಂ ಸದಸ್ಯರಾದ ಅಶೋಕ ಗುಳದಳ್ಳಿ, ಮಂಜುಳಾ ಹುಣಶಿಹಾಳ, ಶಿವಪುತ್ರಪ್ಪ ಪೂಜಾರ, ಸರೋಜ ಬಂಗಾಳಿ, ಪ್ರಮುಖರಾದ ಅಂಬಣ್ಣ ಮಾದಾಪುರ, ಕೊಟ್ರಯ್ಯ ಸಸಿಮಠ, ಪತ್ರೆಪ್ಪ ಏಣಿಗಿ, ಗಾಳಿದೇವಪ್ಪ ಹರಿಜನ, ಮಾರುತಿ ತಳವಾರ ಇತರರಿದ್ದರು.