ಜಿಲ್ಲೆ

ಯತ್ನಾಳ ಮಾತಿಗೆ ಬೆಲೆ ಇಲ್ಲ, ಸಚಿವ ಆರ್​.ಬಿ.ತಿಮ್ಮಾಪುರ ಹೇಳಿಕೆ

ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್​ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಕೆಲವರು ಕಾವಲಿಗೆ ಬೊಗಳುವ ನಾಯಿ ಇಟ್ಟುಕೊಂಡಿರುತ್ತಾರೆ. ಯತ್ನಾಳ ಸಹ ಹಾಗೇ ಎಂದು ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪುರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಚೋದನಕಾರಿ ಹೇಳಿಕೆ ನೀಡುವ ಯತ್ನಾಳ ಮಾತು ಯಾರೂ ಕಿವಿಗೆ ಹಾಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ಕೆಲವರನ್ನು ಒದರಲೆಂದೇ ಇಟ್ಟುಕೊಂಡಿದ್ದಾರೆಂದರು.

ಸಿಎಂ ಬದಲಾವಣೆ ಕುರಿತು ಮಾತನಾಡಿ, ಸಿಎಂ ಸ್ಥಾನ ನೀಡುತ್ತೇನೆ ಎಂದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ, ನಾನಾಗುತ್ತೇನೆ, ನೀನಾಗುತ್ತೇನೆ ಎಂದರೆ ಆಗುವುದಿಲ್ಲ. ಅದು ಶಾಸಕಾಂಗ ಸಭೆಯಲ್ಲಿ ರ್ನಿಣಯ ಆಗಬೇಕು. ಗುಡಿಸಲಿನಲ್ಲಿ ಇದ್ದವರೂ ಸೇರಿ ಯಾರೂ ಬೇಕಾದರೂ ಸಿಎಂ ಆಗಬಹುದು. ಎಲ್ಲರಿಗೂ ಯೋಗ್ಯತೆ ಇದೆ. ಆದರೆ, ಸಿಎಂ ಖುರ್ಚಿ ಖಾಲಿ ಇಲ್ಲ. ಲಿಂಗಾಯತ, ದಲಿತ ಹೀಗೆ ಎಲ್ಲರೂ ತಮ್ಮ ಸಮುದಾಯದಲ್ಲಿ ಕೊಟ್ಟರೆ ತಮಗೆ ಕೊಡಲಿ ಎನ್ನುವುದು ಆಯಾ ಸಮುದಾಯ ಶಾಸಕರ ಆಸೆ ಸಹಜ ಅದರಲ್ಲಿಲ್ಲೇನಿದೆ ಎಂದರು.

ಶಾಸಕ ಮುನಿರತ್ನ ಬಂಧನಕ್ಕೆ ಪ್ರತಿಕ್ರಿಯಿಸಿ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಮುನಿರತ್ನ ತಪು$್ಪ ಮಾಡಿದ್ದಾರೆ. ಅದಕ್ಕೆ ಬಂಧಿಸಿದ್ದಾರೆ. ಹಿಂದೆಯೂ ಅನೇಕ ಶಾಸರಕನ್ನು ಬಂಧಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿಸಿದರು. ಮದ್ಯ ದರದಲ್ಲಿ ಏರಿಕೆ ಮಾಡಿಲ್ಲ. ಪ್ರಿಮಿಯಂ ಮದ್ಯದರ ಇಳಿಕೆ ಮಾಡಲಾಗಿದೆ. ಅಬಕಾರಿ ಅಧಿಕಾರಿಗಳಿಗೆ ಗುರಿ ಸಾಧನೆ ಮಾಡಿಲ್ಲವೆಂದು ಯಾವುದೇ ನೋಟಿಸ್​ ನೀಡಿಲ್ಲವೆಂದರು.