ಕೊಪ್ಪಳ : ಜೈ ನರೇಂದ್ರ ಯುವಜನ ಹಿತ ಸಂಸ್ಥೆ ಬಾಗಲಕೋಟೆ ಹಾಗೂ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಯುವ ಮಾರ್ಗ ಉಚಿತ ಸೈನಿಕ ತರಬೇತಿ ಕೇಂದ್ರದಿಂದ ಬೆಳಗಾವಿ ಎ.ಆರ್.ಒ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿ ಮುಖ್ಯ ತರಬೇತಿದಾರ ಕೆ.ರಾಘವೇಂದ್ರ ಹೇಳಿದರು.
ಡೆಮೊ ರ್ಯಾಲಿಯಲ್ಲಿ ಆಯ್ಕೆಯಾದ 100 ವಿದ್ಯಾರ್ಥಿಗಳಿಗೆ ಮಳೆ ಮಲ್ಲೇಶ್ವರ ದೇವಸ್ಥಾನದ ಬಳಿ 60 ದಿನ ಉಚಿತ ತರಬೇತಿ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿ, ಕೋಚಿಂಗ್, ವ್ಯಕ್ತಿತ್ವ ವಿಕಸನ ಶಿಬಿರ, ಯೋಗ ತರಗತಿ, ಉಡುಪು, ನಿಕ್ಯಾಪ್ ಸೇರಿ ಇತರ ಸೌಲಭ್ಯ ನೀಡಲಾಗುವುದು. ಊಟದ ಖರ್ಚು 7,200ರೂ. ಭರಿಸಬೇಕು. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಮೊ.ಸಂ: 9606816822, 7259265312, 9148112961ಗೆ ಸಂಪರ್ಕಿಸಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಥೆಯ ಭೀಮರಾಜ ರಡ್ಡೇರ, ವಿನೋದ ಗುಂಡ್ಲೂರು, ಶ್ರೀಶೈಲ ಕಲಬುರ್ಗಿ, ಆಕಾಶ್ ಇದ್ದರು.