ಜಿಲ್ಲೆ

ಲಾಕ್‌ಡೌನ್ ಸಡಿಲಿಕೆಯಿಂದ ಮಾರುಕಟ್ಟೆಯಲ್ಲಿ ಜನಸಂದಣಿ; 15 ದಿನಗಳ ಬಳಿಕ ಕಠಿಣ ನಿಯಮಗಳ ತೆರವು

Koppal

ಬ್ಯಾರಿಕೇಡ್ ಕಿತ್ತೆಸದ ಸಂಚಾರ

ಕೊಪ್ಪಳ: ಕರೊನಾ ಪ್ರಕರಣಗಳು ತಗ್ಗಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. 15 ದಿನಗಳ ಬಳಿಕ ಕಠಿಣ ನಿಯಮಗಳು ತೆರವುಗೊಂಡಿವೆ. ಇದರಿಂದಾಗಿ ಸೋಮವಾರ ಜನರು ದಿನಸಿ, ತರಕಾರಿ ಅಂಗಡಿಗಳಿಗೆ ಮುಗಿಬಿದ್ದು ಸಾಮಗ್ರಿ ಖರೀದಿಸಿದರು.

ಸೋಮವಾರದಿಂದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಗರದಲ್ಲಿ ಮಧ್ಯಾಹ್ನವಾದರೂ ಜನರ ಓಡಾಟ ಕಡಿಮೆಯಾಗಿರಲಿಲ್ಲ. ಮುಖ್ಯ ಹಾಗೂ ಒಳ ರಸ್ತೆಗಳಿಗೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಜನರು ಓಡಾಡಿದರು. ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಕರ್ತವ್ಯದ ಮೇಲಿದ್ದ ಪೊಲೀಸರು ಅಸಹಾಯಕರಾಗಿ ನಿಂತಿದ್ದರು. ಬಡಾವಣೆಗಳಲ್ಲಿ ಜನ ಸಂಚಾರ ಸಾಮಾನ್ಯವಾಗಿತ್ತು.