ಜಿಲ್ಲೆ

ಪ್ರವೇಶ ಶುಲ್ಕ ಇಳಿಕೆ ಮಾಡಿ

Kopala - Raveendra V K

ಕೊಪ್ಪಳ: ಪ್ರವೇಶ ಶುಲ್ಕ ಇಳಿಕೆ ಮಾಡುವಂತೆ ಒತ್ತಾಯಿಸಿ ನಗರದ ದಣ ಭಾರತ ಹಿಂದಿ ಪ್ರಚಾರ ಸಭಾದ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಕಾಲೇಜು ವಿದ್ಯಾರ್ಥಿಗಳು ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು.

ಪ್ರಸಕ್ತ ವರ್ಷದಲ್ಲಿ ಪ್ರವೇಶ ಶುಲ್ಕ ದುಪಟ್ಟು ಮಾಡಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ. ದುಪ್ಪಟ್ಟು ಶುಲ್ಕ ಏರಿಸಿದಲ್ಲಿ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲವೆಂದು ದೂರಿದರು.

ತಕ್ಷಣ ಶುಲ್ಕ ಇಳಿಕೆ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಸುತ್ತೇವೆಂದು ತಿಳಿಸಿದರು. ಪ್ರಾಚಾಯೆರ್ ಉಷಾದೇವಿ ಹಿರೇಮಠಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ವಿರುಪಾಕ್ಷಪ್ಪ, ನಿಂಗಪ್ಪ ಮಜ್ಜಿಗಿ, ನಂದಿನಿ, ಮಹಾಲಕ್ಷಿ$್ಮ, ಸುಧಾ, ಪ್ರಗತಿ, ಉಮಾದೇವಿ, ಕಿರಣಕುಮಾರ, ಮಂಜುನಾಥ, ಚನ್ನಬಸವ, ಸರ್ವಜ್ಞಮೂರ್ತಿ ಇತರರಿದ್ದರು.