ಜಿಲ್ಲೆ

ಶಿಕ್ಷಣದಲ್ಲಿ ಹಿಂದಿದ್ದಾರೆ ಅಲ್ಪಸಂಖ್ಯಾತರು

Kopala - Raveendra V K

ಕೊಪ್ಪಳ: ದೇಶದಲ್ಲಿ ಅಲ್ಪಸಂಖ್ಯಾತರು ದಲಿತರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಹೇಳಿದರು.

ನಗರದ ಫಿದೋರ್ಸ್​ ಮಸೀದಿಯಲ್ಲಿ ನಿವೃತ್ತ ಶಿಕ್ಷಕ ಮೊಹಮ್ಮದ್​ ವಹಿದುದ್ದೀನ್​ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಖಿರಾಅತ್​ ಖುರ್​ ಆನ್​ ಪಠಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ನಮಗೆಲ್ಲ ಧಾರ್ಮಿಕ ಮತ್ತು ಲೌಕಿಕ ಶಿಕ್ಷಕ ಪಡೆಯಲು ಅವಕಾಶವಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಉತ್ತಮ ಪ್ರಜೆಗಳಾಗಿ ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಫಿದೋರ್ಸ್​ ಸಾಂಸತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಮಕ್ಕಳಿಗೆ ಯಾವ ರೀತಿ ತರಬೇತಿ ನೀಡಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಇಂದಿನ ಪರರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ಅರೇಬಿಕ್​ ಮತ್ತು ಜಗತ್ತಿನ ಶಿಕ್ಷಣ ಸರಿಯಾಗಿ ನೀಡಲಾಗುತ್ತಿಲ್ಲ. ಸಂಸ್ಥೆ ಇನ್ನಷ್ಟು ಶೈಕ್ಷಣಿಕ ಕಾರ್ಯಚಟುವಟಿಕೆ ನಡೆಸಲಿ ಎಂದರು.

ಹೊಸಪೇಟೆಯ ಹಾಫಿಝ್​ ವ ಖಾರಿ ಮೊಹಮ್ಮದ್​ ಹಿದಾಯತುಲ್ಲಾ ರಹೆಮಾನಿ ಮಾತನಾಡಿ, ತಂದೆ&ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಭವಿಷ್ಯ ರೂಪಿಸುತ್ತಾರೆ. ಶಿಕ್ಷಕರು ಮಕ್ಕಳನ್ನು ವೈರಿಗಳಂತೆ ಕಾಣುವುದಿಲ್ಲ. ಎಲ್ಲರಿಗೂ ಸಮಾನ ವಿದ್ಯಾ ದಾನ ಮಾಡುತ್ತಾರೆ ಎಂದು ತಿಳಿಸಿದರು.

ಉರ್ದು ಉಪನ್ಯಾಸಕ ಮೌಲಾನಾ ಮೊಹಮ್ಮದ್​ ಅಲಿ ಹಿಮಾಯಿತಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಮೌಲಾನಾ ಸಿರಾಜುದ್ದೀನ್​ ರಶಾದಿ ಮಾತನಾಡಿದರು. ಫಿದೋರ್ಸ್​ ಮಸೀದಿ ಅಧ್ಯಕ್ಷ ಅಲಿ ಜನಾಬ್​ ಉಸ್ಮಾನ್​ ಅಲಿ ಖಾನ್​, ಪ್ರಮುಖರಾದ ಬಹದ್ದೂರ್​ ಖಾನ್​, ಫಜಲ್​ ಅಹಮದ್​ ಖಾನ್​, ಸುನ್ನಿ ಮುಸ್ಲಿಮ್​ ಶಾದಿ ಮಹಲ್​ ಕಮಿಟಿ ಅಧ್ಯಕ್ಷ ಅಜೀಜ್​ ಎ. ಚೌಥಾಯಿ, ನಿವೃತ್ತ ಉಪನ್ಯಾಸಕ ಮೊಹಮ್ಮದ್​ ಅನ್ವರ್​, ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಷಾ, ಎಂ.ಪಾಷಾ ಕಾಟನ್​, ಜಮೀರ್​ ಅಹ್ಮದ್​ ಇತರರಿದ್ದರು.