ಜಿಲ್ಲೆ

ನರೇಗಾ ಕಾಮಗಾರಿಗಳ ಉದ್ಘಾಟಣೆ ನಾಳೆ: ಕುಕನೂರು ತಾಪಂ ಇಒ ರಾಮಣ್ಣ ದೊಡ್ಮನಿ ಮಾಹಿತಿ

ಕುಕನೂರು: ತಾಲೂಕಿನ ಬನ್ನಿಕೊಪ್ಪದಲ್ಲಿ ಆ.13ರಂದು ತಾಲೂಕಿನ ವಿವಿಧೆಡೆ ನರೇಗಾ ಯೋಜನೆ ಹಾಗೂ ಗ್ರಾಪಂಗಳ ಸಂಪನ್ಮೂಲಗಳಿಂದ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ತಾಪಂ ಇಒ ರಾಮಣ್ಣ ದೊಡ್ಮನಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಚಿವ ಹಾಲಪ್ಪ ಆಚಾರ, ಜಿಪಂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬನ್ನಿಕೊಪ್ಪದಲ್ಲಿ ನರೇಗಾದಡಿ ಕೆರೆ ಅಭಿವೃದ್ಧಿ, ಆಸ್ಪತ್ರೆಗೆ ಉದ್ಯಾನ ನಿರ್ಮಾಣ, ಗಂಥಾಲಯ ನವೀಕರಣ, ಗ್ರಾಪಂ ಹೊಸ ಕಟ್ಟಡ, ಅಂಗನವಾಡಿ ಕೇಂದ್ರ, ಉದ್ಯಾನ ನಿರ್ಮಿಸಲಾಗಿದೆ.

ಭಾನಾಪುರದಲ್ಲಿ ವಿನೂತನ ಗ್ರಂಥಾಲಯ, ಗ್ರಾಪಂ ಉದ್ಯಾನ, ತಳಬಾಳ ಅಮೃತ ಸರೋವರ, ಗ್ರಾಪಂ ಕಚೇರಿ ಒಳಾಂಗಣ ನವೀಕರಣ ಮಾಡಲಾಗಿದೆ. ತಳಕಲ್, ಯರೇಹಂಚಿನಾಳ, ಶಿರೂರ, ಬೆಣಕಲ್, ಮಸಬಹಂಚಿನಾಳ, ಬಳಗೇರಿ, ಇಟಗಿ, ಕುದರಿಮೋತಿ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು. ಹರ್ ಘರ್ ತಿರಂಗಾ ನಿಮಿತ್ತ ತಾಲೂಕಿನಲ್ಲಿ 20 ಸಾವಿರ ಕುಟುಂಬಗಳಿಗೆ ಈಗಾಗಲೇ ಗ್ರಾಪಂ ಪಿಡಿಒ ಮೂಲಕ ತಿರಂಗಾ ತಲುಪಿಸುವ ಕೆಲಸ ಮಾಡಲಾಗಿದೆ. ಆ.13 ರಂದು ಆಯಾ ಗ್ರಾಮದ ಶಿಕ್ಷಕರಿಗೆ ಧ್ವಜ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು. ನರೇಗಾ ತಾಂತ್ರಿಕ ಸಯೋಜಕ ಸಂತೋಷ ನಂದಾಪುರ ಇದ್ದರು.