ಜಿಲ್ಲೆ

ಟ್ರ್ಯಾಕ್ಟರ್-ಬೈಕ್ ನಡುವೆ ಅಪಘಾತ, ಶಿಕ್ಷಕ ಸಾವು

Koppal kukanoor teacher death bike accident

ಕುಕನೂರು(ಕೊಪ್ಪಳ): ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು ಎದುರು ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಮಾಬಾಯಿ ಅಂಬೇಡ್ಕರ್ ಶಾಲೆಯ ಶಿಕ್ಷಕ ಶಾಂತವೀರಪ್ಪ ಬನ್ನಿಕೊಪ್ಪ (46) ಭಾನುವಾರ ಸಾವನ್ನಪ್ಪಿದ್ದಾರೆ.

ಅಪಘಾತದ ರಭಸಕ್ಕೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರಿಗೆ ತಂದೆ, ತಾಯಿ, ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಶಿಕ್ಷಕ ಶಾಂತವೀರಪ್ಪ ಬನ್ನಿಕೊಪ್ಪ ವಿಜ್ಞಾನ ಶಿಕ್ಷಕರಾಗಿದ್ದು, ಕಲಾವಿದರೂ ಸಹ ಆಗಿದ್ದರು.

ಸಾಬೂನಿನಲ್ಲಿ ಹಾಗೂ ಕಚ್ಚಾ ವಸ್ತುವಿನಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದರು. ವಿವಿಧ ಕವನ ಸಂಕಲನ ಸಹ ಬರೆದಿದ್ದಾರೆ.