ಜಿಲ್ಲೆ

ವಿವಿಧ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಸ್ಥಳದಲ್ಲಿಯೇ ಪ್ರವೇಶಾತಿ

Kopala - Raveendra V K

ಕೊಪ್ಪಳ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಕೊಪ್ಪಳದಲ್ಲಿ ಪ್ರಾರಂಭಿಸಲಾಗಿದ್ದು, 2024&-25ನೇ ಸಾಲಿನ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸ್ಥಳದಲ್ಲಿಯೇ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ದೆಶಕ ಸಂದೇಶ್​ ಕೆ.ಎಸ್​. ತಿಳಿಸಿದ್ದಾರೆ.

ಕೊಪ್ಪಳದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೊದಲನೇ ಮಹಡಿಯಲ್ಲಿ ಕೇಂದ್ರ ಆರಂಭಿಸಲಾಗಿದೆ. 2024&-25ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿವೆ. ಪ್ರಥಮ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಲಿಬ್​ & ಐ.ಎಸ್ಸಿ, ಬಿ.ಸಿ.ಎ., ಬಿ.ಬಿ.ಎ ಮತ್ತು ಬಿ.ಎಸ್​.ಡಬ್ಲೂ ಹಾಗೂ ವಿವಿಧ ಎಂ.ಎ (ಕನ್ನಡ, ಇಂಗ್ಲೀಷ್​,ಹಿಂದಿ, ಸಂಸತ, ತೆಲುಗು, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಸಾಸ್ತ್ರ, ಪ್ರಾಚಿನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಶಿಕ್ಷಣಶಾಸ್ತ್ರ) ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಕಾಂ., ವಿವಿಧ ಎಂ.ಎಸ್ಸಿ (ರಸಾಯನಶಾಸ್ತ್ರ, ಜೀವಶಾಸ್ತ್ರ, ಮಾನವಶಾಸ್ತ್ರ, ಸಸ್ಯಶಾಸ್ತ್ರ,, ಜೈವಿಕತಂತ್ರಜ್ಞಾನ, ಪರಿಸರವಿಜ್ಞಾನ, ವೈದ್ಯಕಿಯ ಪೋಷಣೆ ಮತ್ತು ಆಹಾರ ಪದ್ಧತಿ, ಆಹಾರ ಮತ್ತು ಪೋಷಣೆ, ಜೀವ ರಸಾಯನಶಾಸ್ತ್ರ ಭೂಗೋಳಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಸೂಕ್ಷ$್ಮಜಿವವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ ವಿಷಯಗಳಿಗೆ ಪ್ರವೇಶ ಪಡೆಯಬಹುದು.

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಕೊಪ್ಪಳ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ಶುಲ್ಕ ಆನ್​ಲೈನ್​ನಲ್ಲಿ ಪಾವತಿಸಿ, ಅಗತ್ಯ ದಾಖಲೆಗಳ ನಕಲು ಪ್ರತಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಮಾಹಿತಿಗಾಗಿ:9008588675 ಅಥವಾ 9743582257, 9071179986 ಗೆ ಹಾಗೂ ವಿವಿಯ ಅಂರ್ತಜಾಲ ವಿಳಾಸ: ಡಿಡಿಡಿ.ಠಟ್ಠಞಢಠ್ಠ್ಟ್ಠ.ಚ್ಚ.ಜ್ಞಿ ಕ್ಕೆ ಸಂಪರ್ಕಿಸಲು ತಿಳಿಸಿದ್ದಾರೆ.