ಕೊಪ್ಪಳ: 2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಂಡಿದ್ದು, ಜಿಲ್ಲೆಯ ರೈತರು ಯೋಜನೆಯಡಿ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ತಿಳಿಸಿದ್ದಾರೆ.
ರೈತರು ತಮ್ಮ ಜಮೀನುಗಳಲ್ಲಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಪ್ರತಿಯೊಬ್ಬ ಫಲಾನುಭವಿಗೆ ವಿವಿಧ ಘಟಕಗಳನ್ನು ಕಡ್ಡಾಯವಾಗಿ ಅನುಫಿ್ಟಾನಮಾಡಲಾಗುವುದು.
ಕೃಷಿ ಭಾಗ್ಯ ಯೋಜನೆಯ ಘಟಕಗಳು: ಕ್ಷೇತ್ರಬದು ನಿಮಾರ್ಣ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%), ಕೃಷಿ ಹೊಂಡ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡ ವರ್ಗ 90%), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗ 90%), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (ಸಾಮಾನ್ಯ ವರ್ಗ 40% ಸಹಾಯಧನ & ಪರಿಶಿಫ್ಟಿ ಜಾತಿ/ಪರಿಶಿಫ್ಟಿ ಪಂಗಡ ವರ್ಗ 50%), ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್ / ಪೇಟ್ರೋಲ್ ಪಂಪ್ಸೆಟ್ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಫ್ಟಿ ಜಾತಿ/ಪರಿಶಿಫ್ಟಿ ಪಂಗಡ ವರ್ಗ 90%), ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ (ಎಲ್ಲಾ ವರ್ಗದ ರೈತರಿಗೆ 90%) ಸಹಾಯಧನ ಸೌಲಭ್ಯ ಸಿಗಲಿದೆ.
ರೈತ ಭಾಂದವರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ರೈತರು ಕನಿಷ್ಠ 1 ಎಕರೆ ಜಮೀನನ್ನು ಹೊಂದಿರಬೇಕು. ಈ ಯೋಜನೆಯನ್ನು ಜಿಲ್ಲೆಯ ರೈತರ ಅವಶ್ಯಕತೆಗನುಗುಣವಾಗಿ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಂತೆ ಕಾರ್ಯಕ್ರಮ ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದಾರೆ.