ಕಿನ್ನಾಳ ಗ್ರಾಮದಲ್ಲಿ ಬಾಲಕಿ ಹತ್ಯೆ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ಎಎಸ್ಪಿ ಹೇಮಂತ ಕುಮಾರ್‌ಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಬಾಷಾ ಹಿರೇಮನಿ, ಬಸವರಾಜ ಚಿಲವಾಡಗಿ ಅನೀಲ ಬೋರಟ್ಟಿ, ಮಂಜು ಉದ್ದಾರ, ಮಂಜುನಾಥ ಗೊಂಡಬಾಳ, ವೀರೇಶ ತಾವರಗೇರಿ ಇದ್ದರು.  
ಜಿಲ್ಲೆ

ಬಾಲಕಿ ಹತ್ಯೆಗೈದವರ ಬಂಧಿಸಿ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಬಾಲಕಿ ಅನುಶ್ರೀ ಹತ್ಯೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ಎಸ್ಪಿ ಯಶೋದಾ ವಂಟಗೋಡಿಗೆ ಮನವಿ ಸಲ್ಲಿಸಿದರು.

ಕರಕುಶಲ ಕಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಕಿನ್ನಾಳ ಗ್ರಾಮದಲ್ಲಿ ಮಗುವನ್ನು ಕೊಲೆ ಮಾಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಎಲ್ಲರ ಮಾನಸಿಕ ನೆಮ್ಮದಿ ಹಾಳಾಗಿದೆ. ಗ್ರಾಮದಲ್ಲಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕಿದೆ. ಬಾಲಕಿ ಅನುಶ್ರೀ ಮಡಿವಾಳ ಕಾಣೆಯಾದ ಎರಡು ದಿನಕ್ಕೆ ಶವವಾಗಿ ಪತ್ತೆಯಾಗಿದ್ದು, ಗ್ರಾಮಕ್ಕೆ ಕೆಟ್ಟ ಹೆಸರು ತಂದಿದೆ ಎಂದರು.

ಆದಷ್ಟು ಬೇಗ ಕೊಲೆ ಮಾಡಿದವರನ್ನು ಪತ್ತೆ ಮಾಡಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಗ್ರಾಮದಲ್ಲಿ ಮರಳು ಅಕ್ರಮ ಸಾಗಣೆ ಆರಂಭವಾಗಿದೆ. ಡ್ರಗ್ಸ್, ಗಾಂಜಾ ಸೇವನೆ, ಸಲಿಂಗ ಕಾಮಿಗಳ ಕಾಟ ಹೆಚ್ಚಾಗಿದೆ. ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ತಡೆಯಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರಾದ ಬಾಷಾ ಹಿರೇಮನಿ, ಬಸವರಾಜ ಚಿಲವಾಡಗಿ ಅನೀಲ ಬೋರಟ್ಟಿ, ಮಂಜು ಉದ್ದಾರ, ಮಂಜುನಾಥ ಗೊಂಡಬಾಳ, ್ಖಜಿರೇಶ ತಾವರಗೇರಿ ಇತರರಿದ್ದರು.