ಕೊಪ್ಪಳ: ನಗರದ ವಾರ್ಡ್ 1ರ ಹುಲಿಕೆರೆ ರಸ್ತೆ ಪ್ರದೇಶದಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಕರವೇ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ಗೆ ಮನವಿ ಸಲ್ಲಿಸಿದರು.
ಇಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯಗಳಿಲ್ಲ. ಉತ್ತಮ ರಸ್ತೆ, ಚರಂಡಿ, ಕುಡಿವ ನೀರು ಕಲ್ಪಿಸಿಲ್ಲ. ಜಿಲ್ಲಾ ಕೇಂದ್ರದಲ್ಲೇ ಈ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿ. ಮಳೆಗಾದಲ್ಲಿ ನೀರು ಸಂಗ್ರಹವಾಗಿ ಕೆಸರು ಗದ್ದೆಯಂತಾಗುತ್ತದೆ. ಜನರು ಓಡಾಡುವುದು ಕಷ್ಟವಿದೆ. ಅಂಗನವಾಡಿ, ಶಾಲೆ ಇದ್ದು ಮಕ್ಕಳು ಹೋಗಿಬರಲು ಪರದಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ನಗರಸಭೆ ಸೌಲಭ್ಯ ಕಲ್ಪಿಸಿಲ್ಲವೆಂದು ದೂರಿದರು.
15 ದಿನದಲ್ಲಿ ಸೌಕಉರ್ಯ ಕಲ್ಪಿಲಸು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ, ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ತಾಲೂಕಾ ಪ್ರ.ಕಾ.ನಿಂಗಪ್ಪ ಮೂಗಿನ, ಸುಲೇಮಾನ್ ಕರಮುಡಿ ಇತರರಿದ್ದರು.