ಕೊಪ್ಪಳ: ಆರೋಗ್ಯ ಇಲಾಖೆಯಿಂದ ಏಡ್ಸ್ ತಡೆ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಪುರುಷರ ವಿಭಾಗದಲ್ಲಿ ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ವಿಭಾಗದಲ್ಲಿ ಕೊಪ್ಪಳ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಎ ತಂಡ ಪ್ರಥಮ ಸ್ಥಾನ ಪಡೆದವು.
ಪುರುಷರ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವೀತಿಯ), ಕೊಪ್ಪಳ ಕಿಮ್ಸ್ ನರ್ಸಿಂಗ್ ಕಾಲೇಜು (ತೃತೀಯ) ಬಹುಮಾನ ಪಡೆದವು. ಮಹಿಳಾ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಿ ತಂಡ (ದ್ವೀತಿಯ), ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕನಕಗಿರಿ (ತೃತೀಯ) ಸ್ಥಾನ ಪಡೆದವು.
ಪಂದ್ಯದಲ್ಲಿ 13 ಪುರುಷ, 5 ಮಹಿಳಾ ತಂಡ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಕರಾದ ಶರಣಬಸವ ಬಿ., ಬಸವರಾಜ ಎ., ಗದಿಗೆಪ್ಪ, ಲೋಹಿತ್ಗೌಡ, ಆನಂದ್, ಶಂಕರ್, ಬಸವರಾಜ ಎಚ್., ವಿರೂಪಾಕ್ಷಪ್ಪ, ಶರಣಬಸವಸ್ವಾಮಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಶಿಧರ ಇತರರಿದ್ದರು.