ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಜೆಡಿಎಸ್​ ಪಕ್ಷದ ಬರ ಪರಿಶೀಲನಾ ತಂಡ ಸುತ್ತಮುತ್ತ ರೈತರ ಜಮೀನುಗಳಿಗೆ ತೆರಳಿ ಬರ ಪರಿಶೀಲನೆ ನಡೆಸಿತು. ಜೆಡಿಎಸ್​ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್​, ಜಿಲ್ಲಾಧ್ಯಕ್ಷ ವೀರೇಶ್​ ಮಹಾಂತಯ್ಯನಮಠ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಸೊರಟೂರ, ಯಲಬುರ್ಗಾ ತಾಲೂಕು ಅಧ್ಯಕ್ಷ ಮಲ್ಲನಗೌಡ ಕೊನನ ಗೌಡರ ಇದ್ದರು. 
ಜಿಲ್ಲೆ

ಜೆಡಿಎಸ್​ ನಾಯಕರಿಂದ ಕೊಪ್ಪಳ ಜಿಲ್ಲೆಯಲ್ಲಿ ಬರ ಅಧ್ಯಯನ

koppal jds drought study c.v.chandrashekhar team nelajeri kukanoor

ಕುಕನೂರು (ಕೊಪ್ಪಳ): ಜಿಲ್ಲೆಯಲ್ಲಿ ಬರ ಆವರಿಸಿದ್ದು, ಜೆಡಿಎಸ್​ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್​ ನೇತೃತ್ವದಲ್ಲಿ ಬುಧವಾರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿತು.
ಕುಕನೂರು ತಾಲೂಕಿನ ನೆಲಜೇರಿ ಗ್ರಾಮದ ವಿವಿಧ ಹೊಲಗಳಿಗೆ ತೆರಳಿ ಪರಿಸ್ಥಿತಿ ಅರಿಯಿತು. ರೈತರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆಯಿತು.
ಬಳಿಕ ಮಾತನಾಡಿದ ಸಿವಿಸಿ, ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ರಾಜ್ಯದಲ್ಲಿ ಭೀಕರ ಬರ ಇದ್ದರೂ ರಾಜ್ಯ ಸರ್ಕಾರ ರೈತರಿಗೆ ಸರಿಯಾದ ರೀತಿ ಸ್ಪಂದನೆ ಮಾಡಿಲ್ಲ. ಸರ್ಕಾರದ ವೈಫಲ್ಯ ಖಂಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಾಂತ್ವನ ಯಾತ್ರೆ ನಡೆಸಲಾಗುವುದು. ಡಿಸೆಂಬರ್​ನಲ್ಲಿ ಆರಂಭವಾಗುವ ವಿಧಾನಸಭಾ ಚಳಿಗಾಲ ಅಧಿವೇಶನದಲ್ಲಿ ರೈತರ ಪರ ಧ್ವನಿ ಎತ್ತಲು ನಿರ್ಧರಿಸಲಾಗಿದೆ ಎಂದರು.

ಮಂಜುನಾಥ ಸೊರಟೂರ, ಯಲಬುರ್ಗಾ ತಾಲೂಕು ಅಧ್ಯಕ್ಷ ಮಲ್ಲನಗೌಡ ಕೊನನ ಗೌಡರ, ಪ್ರಮುಖರಾದ ಶರಣಪ್ಪ ರಾಂಪೂರ, ಚನ್ನಪ್ಪ ಮುತ್ತಾಳ, ಶರಣಪ್ಪ ಪಾಟೀಲ್​, ಬಸವರಾಜ, ಶರಣಪ್ಪ ತಳವಾರ, ಪಂಪನಗೌಡ ಮಾಲಿಪಾಟೀಲ್​, ದ್ಯಾಮಣ್ಣ ದೊಳ್ಳಿನ್​, ಬಸವರಾಜ ಗುಳಗುಳಿ ಇತರರಿದ್ದರು.