ಜಿಲ್ಲೆ

ಏಡ್ಸ್​ ನಿಯಂತ್ರಣ ಜಾಗೃತಿ ವಹಿಸಿ : ಡಿಎಚ್​ಒ ಡಾ.ಟಿ.ಲಿಂಗರಾಜು

ಕೊಪ್ಪಳ: ಏಡ್ಸ್​ ರೋಗಿಗಳನ್ನು ಸೊನ್ನೆಗೆ ತರಲು ಸರ್ಕಾರ ಹಲವು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನರು ರೋಗದ ಬಗ್ಗೆ ಕಾಳಜಿವಹಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಲಿಂಗರಾಜು ತಿಳಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಯುವ ಜನೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ್​ ಪದವಿ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಮತ್ತು ಸಿರಂಜ್​, ರಕ್ತ ಪರೀಕ್ಷೆ ಮಾಡದೇ ರಕ್ತ ಪಡೆಯುವುದು, ಸೋಂಕಿತ ಪಾಲಕರಿಂದ ಮಗುವಿಗೆ ಹರಡುವ ಸಾಧ್ಯತೆ ಇದೆ. ಇತ್ತೀಚೆಗೆ 15&29 ವರ್ಷದೊಳಗಿನ ಯುವಕರು ಎಚ್​ಐವಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಏಡ್ಸ್​ ಜಾಗೃತಿ ಅಂಗವಾಗಿ ಕಬಡ್ಡಿ ಪಂದ್ಯ ಆಯೋಜಿಸಲಾಗಿದೆ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಿ. ಕ್ರೀಡಾ ಸ್ಪೂರ್ತಿ ಇರಲಿ ಎಂದರು.

ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ.ಶಶಿಧರ ಎ. ಮಾತನಾಡಿ, ಏಡ್ಸ್​ ನಿಯಂತ್ರಣ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಜಿಲ್ಲಾಮಟ್ಟ ರಸಪ್ರಶ್ನೆ, ಮ್ಯಾರಥಾನ್​ ಹಮ್ಮಿಕೊಳ್ಳಲಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿದ್ದೇವೆ. ಎಚ್​ಐವಿ ಸೋಂಕಿತರನ್ನು ಗೌರವದಿಂದ ಕಾಣಬೇಕು. ಅವರಿಗೂ ಬದುಕುವ ಹಕ್ಕಿದೆ. ರೋಗಕ್ಕೆ ರ್ನಿದಿಷ್ಟ ಮದ್ದಿಲ್ಲ. ಜಾಗೃತೆಯೇ ಔಷಧ ಎಂದು ತಿಳಿಸಿದರು.

ಡಾ.ಪ್ರಕಾಶ ವಿ., ಡಾ.ಪ್ರಕಾಶ ಎಚ್​., ಶಿವಾನಂದ ವಿ.ಪಿ., ಮಹಾಂತೇಶ ಇತರರಿದ್ದರು.