ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಆಕಳ ಬಾಲ ಕತ್ತರಿಸಿರುವುದು. 
ಜಿಲ್ಲೆ

ಆಕಳ ಬಾಲ ಕತ್ತರಿಸಿದ ದುಷ್ಟರು

Kopala - Raveendra V K

ಕೊಪ್ಪಳ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಮನೆ ಮುಂದೆ ಕಟ್ಟಿದ್ದ ಆಕಳಿನ ಬಾಲ ದುಷ್ಕರ್ಮಿಗಳು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.

ಗ್ರಾಮದ ರೈತ ಚನ್ನಬಸಪ್ಪ ಹರಿಜನ ಎಂಬುವರು ಮನೆ ಮುಂದೆ ಆಕಳು ಕಟ್ಟಿ ಹಾಕಿದ್ದಾರೆ. ಬೆಳಗ್ಗೆ ನೋಡಿದಾಗ ಬಾಲ ತುಂಡರಿಸಿ ಬಿದ್ದಿದೆ. ಇದನ್ನು ಕಂಡು ಗಾಬರಿಗೊಂಡಿದ್ದಾರೆ. ಪರಿಶೀಲಿಸಿದಾಗ ಯಾರೋ ಬೇಕೆಂದೇ ಕತ್ತರಿಸಿರುವುದು ಅರಿವಿಗೆ ಬಂದಿದೆ. ಯಾರು ಕೃತ್ಯ ಎಸಗಿದ್ದಾರೆಂದು ಗೊತ್ತಾಗಿಲ್ಲ. ಮನೆಯಂಗಳದಲ್ಲೇ ತಾವು ಮಲಗುತ್ತಿದ್ದು, ಯಾರಾದರೂ ಜೀವಕ್ಕೆ ಹಾನಿ ಮಾಡಿದರೆ ಹೇಗೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುನಿರಾಬಾದ್​ ಠಾಣೆಗೆ ಮನವಿ ಸಲ್ಲಿಸಿ ರಕ್ಷಣೆ ಕೋರಿದ್ದಾರೆ.