ಸದಾಶಿವ, ಜಂಟಿ ಕೃಷಿ ನಿರ್ದೇಶಕ. 
ಜಿಲ್ಲೆ

ಲಿಂಕ್ ಮಾಡದೆ ರಸಗೊಬ್ಬರ ಮಾರಾಟ ಮಾಡಿ: ಜಂಟಿ ಕೃಷಿ ನಿರ್ದೇಶಕ ಸದಾಶಿವ ನಿರ್ದೇಶನ

ಕೊಪ್ಪಳ: ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಹಾಗೂ ಕಂಪನಿಗಳು ರೈತರಿಗೆ ರಸಗೊಬ್ಬರವನ್ನು ಲಿಂಕ್ ಮಾಡದೆ ನೀಡುವಂತೆ ಜಂಟಿ ಕೃಷಿ ನಿರ್ದೇಶಕ ಸದಾಶಿವ ಸೂಚಿಸಿದ್ದಾರೆ.

ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಯೂರಿಯಾ ಹಾಗೂ ಡಿಎಪಿಯನ್ನು ಕೃಷಿಕರು ಖರೀದಿಸುವ ಸಂದರ್ಭದಲ್ಲಿ ಮೂಲ ರಸಗೊಬ್ಬರದೊಡನೆ ರೈತರಿಂದ ಬೇಡಿಕೆ ಇಲ್ಲದಿದ್ದರೂ ಮಾರಾಟಗಾರರು ಹಾಗೂ ಕಂಪನಿಗಳು ತಮ್ಮ ಸಂಸ್ಥೆಯ ಕಾಂಪ್ಲೆಕ್ಸೃ್, ಪೋಟ್ಯಾಶ್ ಹಾಗೂ ಮೈಕ್ರೋನ್ಯೂಟ್ರಿಯಂಟ್ಸ್ ಕಡ್ಡಾಯವಾಗಿ ಜೋಡಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲೆಯ ರೈತರು ಹಾಗೂ ಸಂಘಟನೆಗಳಿಂದ ದೂರುಗಳು ಬರುತ್ತಿವೆ. ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಮೂಲಕ ರೈತರಿಗೆ ರಸಗೊಬ್ಬರ ವಿತರಿಸುವಾಗ ತಮ್ಮ ಸಂಸ್ಥೆಯ ಇತರ ರಸಗೊಬ್ಬರ, ಲಘು ಪೋಷಕಾಂಶಗಳನ್ನು ಖರೀದಿಸಲು ಒತ್ತಾಯಿಸುತ್ತಿರುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾರಾಟಗಾರರ ಹಾಗೂ ಸಂಸ್ಥೆಯ ಮೇಲೆ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ರಸಗೊಬ್ಬರ ನಿಯಂತ್ರಣ ಆದೇಶ 1985 ರಡಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.