ಕೊಪ್ಪಳ: ಚಿತ್ರ ಇತಿಹಾಸ ಕಟ್ಟಿಕೊಡುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಅಭಿಪ್ರಾಯಪಟ್ಟರು.
ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜಿಲ್ಲಾ ಛಾಯಾಗ್ರಾಹಕರ ಕ್ಷೇವಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಛಾಯಾಗ್ರಾಹಕರ ಸವಾವೇಶ ಮತ್ತು ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಅತಿಥಿಗಳಿಲ್ಲದೇ ನಡೆಯಬಹುದು. ಆದರೆ, ಛಾಯಾಗ್ರಾಹಕರಿಲ್ಲದೇ ನಡೆಯುವುದಿಲ್ಲ. ಎಲ್ಲ ರಂಗದಲ್ಲೂ ೆಟೋಗೆ ಆದ್ಯತೆ ಇದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮವಾಗಿದೆ ಎಂದರು.
ಜಿಲ್ಲಾ ಛಾಯಾಗ್ರಾಹಕರ ಕ್ಷೇವಾಭಿವೃದ್ಧಿ ಸಂದ ಅಧ್ಯಕ್ಷ ವಿಜಯಕುವಾರ ವಸದ್ ಮಾತನಾಡಿ, ಛಾಯಾಗ್ರಾಹಕರ ಏಳಿಗೆಗಾಗಿ ಸಂಟನೆ ಮುಖ್ಯ. ಇದು ನಮ್ಮ ಬದುಕಿನ ಬುತ್ತಿ. ವೃತ್ತಿಗೆ ಗೌರವ ನೀಡಿ. ಒಗ್ಗಟ್ಟಿನಿಂದ ಬೇಡಿಕೆ ಈಡೇರಿಕೆಗೆ ಹೋರಾಡೊಣ. ಅಸಂಘಟಿತ ಕಾರ್ಮಿಕ ವಲಯಕ್ಕೆ ನಮ್ಮನ್ನು ಸೇರಿಸಿದ್ದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ೆಟೋ ಪ್ರದರ್ಶನ ಏರ್ಪಡಿಸಲಾಗಿತ್ತು. ಛಾಯಾಗ್ರಾಹಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಯಿತು.