ಜಿಲ್ಲೆ

ಕುಷ್ಟಗಿಗೆ ರೈಲು ಸಂಚಾರ ಆರಂಭವಾಗಲಿ - ಸಚಿವ ಸೋಮಣ್ಣಗೆ ಎಂಎಲ್ಸಿ ಹೇಮಲತಾ, ಮುಖಂಡ ಕ್ಯಾವಟರ್​ ಮನವಿ

ಕೊಪ್ಪಳ: ಜಿಲ್ಲೆಯ ಕುಷ್ಟಗಿವರೆಗೆ ರೈಲು ಸಂಚಾರ ಆರಂಭಿಸಲು ಒತ್ತಾಯಿಸಿ ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ್​ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್​ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣಗೆ ಗುರುವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿ, ಗದಗ&ವಾಡಿ ರೈಲ್ವೆ ಕಾಮಗಾರಿಯು ಕುಷ್ಟಗಿವರೆಗೆ ಪೂರ್ಣಗೊಂಡಿದೆ. ಅಲ್ಲಿವರೆಗೆ ರೈಲು ಸಂಚಾರ ಆರಂಭವಾಗಬೇಕು. ಈ ಭಾಗದ ಜನರು ಆಸ್ಪತ್ರೆ, ವ್ಯಾಪಾರ @ಆಗೂ ಇನ್ನಿತರ ಕೆಲಸಗಳಿಗಾಗಿ ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ಹೋಗಲು ದುಬಾರಿ ವೆಚ್ಚ ಭರಿಸಬೇಕಾಗಿದೆ. ರೈಲು ಸಂಚಾರ ಆರಂಭವಾದರೆ ವ್ಯಾಪಾರಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ. 2025-&26ನೇ ಸಾಲಿನ ಬಜೆಟ್​ನಲ್ಲಿ ಜಿಲ್ಲೆಯ ಬಾಗಲಕೋಟೆ&ಗಂಗಾವತಿ, ದರೋಜಿ&ಗಂಗಾವತಿ, ಆಲಮಟ್ಟಿ&ಚಿತ್ರದುರ್ಗ ಹೊಸ ರೈಲು ಮಾರ್ಗಗಳಿಗೆ ಅನುದಾನ ಒದಗಿಸಬೇಕು ಎಂದಿದ್ದಾರೆ.

ಕೊಪ್ಪಳ, ಹುಲಗಿ, ಮುನಿರಾಬಾದ್​ ರೈಲು ನಿಲ್ದಾಣಗಳ ಕಾಮಗಾರಿ ಆದಷ್ಟು ಶ್ರೀದಲ್ಲಿ ಪೂರ್ಣಗೊಳಿಸಬೇಕು. ರದ್ದಾಗಿರುವ ಬೆಳಗಾವಿ&ಹೈದರಾಬಾದ್​ ರೈಲು ಸಂಚಾರ ಪುನರಾರಂಭ ಮಾಡಬೇಕು. ತಿರುಪತಿ&ಕೊಲ್ಲಾಪೂರ ಮಧ್ಯೆ ಗುಂತಕಲ್​, ಹೊಸಪೇಟೆ, ಹುಬ್ಬಳ್ಳಿ ಮಾರ್ಗವಾಗಿ ವಂದೇ ಭಾರತ್​ ರೈಲು ಪ್ರಾರಂಭಿಸಬೇಕು. ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಕುಷ್ಟಗಿ&ಗೋಕಾಕ, ರಾಯಚೂರ&ಬೆಳಗಾವಿ ಹೊಸ ರೈಲು ಮಾರ್ಗಗಳ ಸರ್ವೇ ಕಾರ್ಯ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

ಜ.14 ರಂದು ರೈಲ್ವೆ ಮೇಲ್ಸೇತುವೆ ಉದ್ಘಾಟನೆ:

ಕೊಪ್ಪಳ: ನಗರದ ಕುಷ್ಟಗಿ ರಸ್ತೆಯ ರೈಲ್ವೆ ಮೇಲ್ಸೇತುವೆಯನ್ನು ಜ.14 ರಂದು ಉದ್ಘಾಟನೆ ಮಾಡಲು ದಿನಾಂಕ ನಿಗದಿಯಾಗಿದೆ.

ಜನರ ಅನುಕೂಲಕ್ಕಾಗಿ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನರಿಗೆ ಉಪಯೋಗವಾಗಲು ಆದಷ್ಟು ಬೇಗನೆ ಉದ್ಘಾಟಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣಗೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ, ರೈಲ್ವೆ ಮೇಲ್ಸೇತುವೆಯನ್ನು ಜ.14 ರಂದು ಉದ್ಘಾಟಿಸಲು ದಿನ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.