DC NALEEN ATHUL 
ಜಿಲ್ಲೆ

ಖರೀದಿ ಕೇಂದ್ರಗಳಿಗೆ ಗ್ರೇಡರ್​ ನೇಮಿಸಿ:ಡಿಸಿ ನಲಿನ್​ ಅತುಲ್

Kopala - Raveendra V K

ಕೊಪ್ಪಳ: ಜಿಲ್ಲೆಯಲ್ಲಿ ಹೆಸರು ಕಾಳು ಖರೀದಿ ಕೇಂದ್ರಗಳಿಗೆ ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಗ್ರೇಡರ್​ ನೇಮಿಸಿ ಆದೇಶ ನೀಡಲು ಡಿಸಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭ ಕುರಿತು ಭಾನುವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್​ೋರ್ಸ್​ ಸಮಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್​ ಹೆಸರಿಗೆ 8,682ರೂ. ನಂತೆ ಗರಿಷ್ಠ 22,215 ಮೆಟ್ರಿಕ್​ ಟನ್​ ಎ್​ಎಕ್ಯೂ ಗುಣಮಟ್ಟದ ಹೆಸರು ಜಿಲ್ಲೆಯಲ್ಲಿ ಖರೀದಿಸಬೇಕಿದೆ. ಕೇಂದ್ರ ತೆರೆದು ನೋಂದಣಿ, ಖರೀದಿ ನಡೆಸಿ. ನಾೆಡ್​ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಿ. ಕುಕನೂರು, ಯಲಬುರ್ಗಾ, ಬನ್ನಿಕೊಪ್ಪ, ಚಿಕ್ಕನೆಕೊಪ್ಪ, ತೊಂಡಿಹಾಳ, ಮಧೋಳ, ಮಂಡಳಗೇರಿ, ತಾವರಗೇರಾ ಹನುಮಸಾಗರ ಹಿರೇಸಿಂಧೋಗಿ, ಮುದ್ದಾಬಳ್ಳಿ, ಕವಲೂರಿನಲ್ಲಿ ಕೇಂದ್ರ ಆರಂಭಿಸಿ. ಕೊಪ್ಪಳ ತಾಲೂಕಿಗೆ ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ, ಕುಕನೂರು, ತಯಬುರ್ಗಾ ತಾಲೂಕಿಗೆ ಯಲಬುರ್ಗಾ ಎಪಿಎಂಸಿ ಕಾರ್ಯದರ್ಶಿ ಹಾಗೂ ಕುಷ್ಟಗಿ ತಾಲೂಕಿನ ಕೇಂದ್ರಗಳಿಗೆ ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ನೋಡಲ್​ ಅಧಿಕಾರಿಗಳಾಗಿರಲಿದ್ದಾರೆಂದರು.

ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಓಂಕಾರ ಎನ್​.ಕೆ. ಮಾತನಾಡಿ, ಪ್ರತಿ ಎಕರೆಗೆ 2 ಕ್ವಿಂಟಾಲ್​ನಂತೆ, ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್​ ಹೆಸರು ಖರೀದಿಸಲಾಗುವುದು. ಎನ್​ಐಸಿ ಅಭಿವೃದ್ಧಿಪಡಿಸಿದ ತಂತ್ರಾಂಶ ಮೂಲಕ ನೋಂದಣಿ ಮಾಡಿಕೊಳ್ಳಲಾಗುವುದು. ಫ್ರೂಟ್ಸ್​ ದತ್ತಾಂದಲ್ಲಿ ರೈತರಿಗೆ ಸಂಬಂಧಿಸಿದಿರುವ ವಿವರಗಳನ್ನು ಭೂಮಿ ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂಡೀರಿಸಲಾಗಿರುತ್ತದೆ ಎಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಕೃಷಿ, ತೋಟಗಾರಿಕೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧಿಕಾರಿಗಳಿದ್ದರು.