ಕೊಪ್ಪಳದಲ್ಲಿ ಇತ್ತೀಚೆಗೆ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಎಂಪವರ್ಡ್​ ಸಮಿತಿ ಸಭೆ ನಡೆಯಿತು. ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್​, ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಹಾಂತೇಶ ಸಂಗಪ್ಪ ದರ್ಗದ್​, ಹೆಚ್ಚುವರಿ ಎಸ್​ಪಿ ಹೇಮಂತ್​ಕುಮಾರ್​ ಇದ್ದರು. 
ಜಿಲ್ಲೆ

ಜಾಮೀನಿಗಾಗಿ ನಗದು ಖಾತಿ ಸೌಲಭ್ಯ ಕಲ್ಪಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

Kopala - Raveendra V K

ಕೊಪ್ಪಳ: ಆರ್ಥಿಕ ದುರ್ಬಲ ವಿಚಾರಣಾಧೀನ ಕೈದಿಗಳು, ಶಿಾ ಬಂಧಿಗಳಿಗೆ ಜಾಮೀನು ನಗದು ಖಾತರಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಂಪವರ್ಡ್​ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕಾರಾಗೃಹದಲ್ಲಿ ದಾಖಲಾಗಿರುವ ವಿಚಾರಣಾಧೀನರು, ಶಿಾ ಬಂಧಿಗಳಿಗೆ ನ್ಯಾಯಾಲಯದ ಆದೇಶದಂತೆ ಶಿೆ ಅವಧಿ ಪುರೈಸಿ ದಂಡ ಮೊತ್ತ ಪಾವತಿಸದಿರುವವರು ಹಾಗೂ ಜಾಮೀನು ಬಿಡುಗಡೆಗೆ ನಗದು ಖಾತರಿ ಪಾವತಿಸದಿರುವವರು ಇರುತ್ತಾರೆ. ಅಂಥವರ ಬಿಡುಗಡೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಂಪವರ್ಡ್​ ಕಮಿಟಿ ಹಾಗೂ ಓವರ್​ಸೈಟ್​ ಕಮಿಟಿ ರಚಿಸಲಾಗಿದೆ. ಆರ್ಥಿಕ ದುರ್ಬಲರಾದ ಬಂಧಿಗಳಿಗೆ ಜಾಮೀನಿಗಾಗಿ ಆರ್ಥಿಕ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

ಆರ್ಥಿಕ ದುರ್ಬಲರಾದ ಬಂಧಿಗಳಿಗೆ 40 ಸಾವಿರ ರೂ.ವರೆಗೆ ಅನುಕೂಲ ಕಲ್ಪಿಸಲು ಎಂಪವರ್ಡ್​ ಸಮಿತಿ ರಚಿಸಸಲಾಗಿದೆ. ಶಿೆ ಪೂರೈಸಿ ದಂಡ ಪಾವತಿಸದವರಿಗೆ 25 ಸಾವಿರ ರೂ.ವರೆಗೆ ಸಹಾಯ ನೀಡಬಹುದು. ಭ್ರಷ್ಟಾಚಾರ ನಿಷೇಧ ಕಾಯ್ದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್​ ಸೇವನೆ ಮಸೂದೆ, ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾದವರಿಗೆ ಈ ಸೌಲಭ್ಯ ಅನ್ವಯ ಆಗುವುದಿಲ್ಲ ಎಂದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ ಚೌವ್ಹಾಣ ಮಾತನಾಡಿ, ಸಮಿತಿಯ ಆರ್ಥಿಕ ಸೌಲಭ್ಯ ಪಡೆಯಲು ಬಂಧಿಗಳು ಆರ್ಥಿಕವಾಗಿ ದುರ್ಬಲವಾಗಿರಬೇಕು. ಪುನರಾವರ್ತಿತ ಅಪರಾಧಿಯಾಗಿರಬಾರದು. ಸ್ವಂತ ಆಸ್ತಿ ಹೊಂದಿರಬಾರದು. ಖಾಸಗಿ ವಕೀಲರನ್ನು ನೇಮಿಸಿಕೊಂಡಿರಬಾರದು. ಸಮಿತಿಯ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಬಂಧಿಗಳಿಗೆ ಆರ್ಥಿಕ ಸೌಲಭ್ಯಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್​, ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಹಾಂತೇಶ ಸಂಗಪ್ಪ ದರ್ಗದ್​, ಹೆಚ್ಚುವರಿ ಎಸ್​ಪಿ ಹೇಮಂತ್​ಕುಮಾರ್​, ತಹಸೀಲ್ದಾರ ವಿಠ್ಠಲ್​ ಚೌಗಲಾ ಇತರರಿದ್ದರು.