ಜಿಲ್ಲೆ

ಖಾದಿ ಮಳಿಗೆ ಉದ್ಘಾಟಿಸಿದ ಡಿಸಿ

ಕೊಪ್ಪಳ: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸೆ.25ರಿಂದ ಅಕ್ಟೋಬರ್​ 4ವರೆಗೆ ಜಿಲ್ಲಾಡಳಿತ ಭವನದಲ್ಲಿ ತಾತ್ಕಾಲಿಕ ಖಾದಿ ಮಾರಾಟ ಮಳಿಗೆ ಆರಂಭಿಸಿದ್ದು, ಬುಧವಾರ ಡಿಸಿ ನಲಿನ್​ ಅತುಲ್​ ಉದ್ಘಾಟಿಸಿದರು.

ಜನರಿಗೆ ಖಾದಿ ಬಟ್ಟೆಗ ಖರೀದಿಸಲು ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಖಾದಿ ಉತ್ಪನ್ನಗಳ ಮಾರಾಟಕ್ಕಾಗಿ ಜಿಲ್ಲಾಡಳಿತ ಭವನದಲ್ಲಿ ತಾತ್ಕಾಲಿಕ ಮಳಿಗೆ ಆರಂಭಿಸಲಾಗಿದೆ. ಖಾದಿ, ರೇಷ್ಮೆ ಬಟ್ಟೆಗಳು, ರೆಡಿಮೇಡ್​ ಬಟ್ಟೆ, ಜಮಖಾನ, ಟಾವೆಲ್​ ಸೇರಿ ಗ್ರಾಮೋದ್ಯೋಗ ಉತ್ಪನ್ನಗಳಾದ ಅಗರಬತ್ತಿ, ಸಾಬೂನು, ಜೇನುತುಪ್ಪ ದೊರೆಯಲಿದೆ ಎಂದು ಜಿಲ್ಲಾ ಗ್ರಾಮೋದ್ಯೋಗ ಅಧಿಕಾರಿ ಕೆ.ವೀರೇಶ ಹೇಳಿದರು. ಕರ್ನಾಟಕ ಸವೋರ್ದಯ ಸೇವಾ ಸಮಿತಿ ಕಾರ್ಯದರ್ಶಿ ವಿದ್ಯಾ ಪಾಟೀಲ, ತಾಂತ್ರಿಕ ಮೇಲ್ವಿಚಾರಕ ವಿಶ್ವನಾಥ ವೈ., ಖಾದಿ ಕಾರ್ಯಕರ್ತ ಬಸವರಾಜ ಇತರರಿದ್ದರು.