ಕೊಪ್ಪಳ: ತಾಲೂಕಿನ ಶಕ್ತಿ ದೇವತೆ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಸನ್ನಿಧಾನ ಸೇರಿ ಕೊಪ್ಪಳ ನಗರ ಹಾಗೂ ವಿವಿಧ ಗ್ರಾಮೀಣ ಭಾಗಗಳಲ್ಲಿ ನವರಾತ್ರಿ ಸಂಭ್ರಮ ಗುರುವಾರದಿಂದ ಆರಂಭವಾಗಿದೆ.
ಹುಲಿಗಿಯಲ್ಲಿ ಹುಲಿಗೆಮ್ಮ ದೇವಿ ತವರೆಂದು ಬಿಂಬಿತವಾದ ಹೊನ್ನೂರಮಟ್ಟಿ ಗ್ರಾಮಕ್ಕೆ ದೇವಿ ಪುರ ಪ್ರವೇಶ ಮಾಡಿ ಪೂಜೆ ಸಲ್ಲಿಸಿ ಬುಧವಾರ ವಾಪಸ್ ಹುಲಿಗಿಗೆ ಆಗಮಿಸಿದ್ದಾಳೆ. ಗುರುವಾರ ಶರನ್ನವರಾತ್ರಿ ಉತ್ಸವ ಆರಂಭಗೊಂಡಿದೆ. ಗುರುವಾರ ಸಂಜೆ 6.30ಕ್ಕೆ ಟಸ್ಥಾಪನೆ ಮಾಡಲಾಯಿತು. ದೇವಸ್ಥಾನ ಸಿಬ್ಬಂದಿ ಮಂಗಳವಾದ್ಯದೊಂದಿಗೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಬಳಿಕ ಹೊಸಪೇಟೆಯ ಮೀರಾ ಹಾಗೂ ತಂಡದವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ದೇವಿಗೆ ಪ್ರಿಯವಾದ ಭಕ್ತೀಗಿತೆಗಳನ್ನು ಪ್ರಸ್ತುತಪಡಿಸಿದರು. ಅ.12ವರೆಗೆ ದೇವಸ್ಥಾನದಲ್ಲಿ ನಿತ್ಯ ವಿಶೇಷ ಪೂಜೆ, ಅಲಂಕಾರ, ಅರ್ಚನೆ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ವೇಳೆ ಸಾಂಸತಿ ಕಾರ್ಯಕ್ರಮಗಳು ಇರಲಿದ್ದು, ಭಕ್ತರಿಗೆ ಮನರಂಜನೆ ನೀಡಲಿವೆ.
ಕೊಪ್ಪಳ ನಗರದ ವಿವಿಧೆಡೆ ದೇವಿ ಪ್ರತಿಷ್ಠಾಪನಾ ಕಾರ್ಯ ಸುಗಮವಾಗಿ ಜರುಗಿತು. ಡೊಳ್ಳು, ಮಂಗಳವಾದ್ಯದೊಂದಿಗೆ ದೇವಿ ಮೂರ್ತಿ ಮೆರವಣಿಗೆ ನಡೆದವು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮೂರ್ತಿ ಟಸ್ಥಾಪನೆ ಮಾಡಲಾಯಿತು. ನಗರದ ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ ಸೇರಿ ವಿವಿಧೆಡೆ ದೇವಿ ಪ್ರತಿಷ್ಠಾಪನೆ ಮಾಡಲಾಗಿದೆ.