ಜಿಲ್ಲೆ

ವಿಭಾಗಮಟ್ಟದ ದಸರಾ ಕ್ರೀಡಾಕೂಟ ಸೆ.29ರಿಂದ

ಕೊಪ್ಪಳ: ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸೆ.29, 30ರಂದು ನಡೆಯಲಿವೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ತಿಳಿಸಿದ್ದಾರೆ.

ಕೊಪ್ಪಳ, ಕಲಬುರಗಿ, ಬಳ್ಳಾರಿ, ವಿಜಯನಗರ, ರಾಯಚೂರು, ಬೀದರ್​ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕ್ರೀಡಾಕೂಟ ಇರಲಿದೆ. ಸೆ.29ರಂದು ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ, ಟೆನ್ನಿಸ್​, ವಾಲಿಬಾಲ್​, ಈಜು, ಹ್ಯಾಂಡ್​ ಬಾಲ್​, ಟೇಬಲ್​ ಟೆನ್ನಿಸ್​ ಸ್ಪರ್ಧೆಗಳು, ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್​, ಫುಟ್ಬಾಲ್​, ಹಾಕಿ,ನೆಟ್​ ಬಾಲ್​ ಸ್ಪರ್ಧೆಗಳು, ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ವುಶು ಸ್ಪರ್ಧೆ, ರಾಯಚೂರು ಕೃಷಿ ಮಹಾವಿದ್ಯಾಲಯ ಹಾಗೂ ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಾಸ್ಕೆಟ್​ಬಾಲ್​, ಥ್ರೋ ಬಾಲ್​, ಕಬಡ್ಡಿ, ಬೀದರ್​ ನೆಹರು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್​ ಬಾಕ್ಸಿಂಗ್​, ಬ್ಯಾಡ್ಮಿಂಟನ್​, ಯಾದಗಿರಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ, ವೇಟ್​ ಲಿಪ್ಟಿಂಗ್​ ಸ್ಪರ್ಧೆಗಳು ನಡೆಯಲಿವೆ.

ಮಾಹಿತಿಗಾಗಿ ಕಲಬುರಗಿ& 9844029235 & 8884774416, ಕೊಪ್ಪಳ &7676343554, 9448633146, 6360146300, 7409272350 ಬಳ್ಳಾರಿ-9036335986 & 9886688858, ವಿಜಯನಗರ 9449126141, ರಾಯಚೂರು 6362238100 & 966364277, ಬೀದರ್​- 8884694472 & 6361488733, ಯಾದಗಿರಿ-9108197572ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.