ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಹುಂಡಿ ಎಣಿಕೆ ಬುಧವಾರ ನಡೆದಿದ್ದು, 94.64 ಲಕ್ಷ ರೂ. ಸಂಗ್ರಹಗೊಂಡಿದೆ.
42 ದಿನಗಳಿಗೆ ಹುಂಡಿ ಭರ್ತಿಯಾಗಿದ್ದು, 94,64,855 ರೂ. ಸಂಗ್ರಹಗೊಂಡಿದೆ. 160 ಗ್ರಾಂ ಕಚ್ಛಾ ಬಂಗಾರ ಮತ್ತು 10 ಕೆಜಿ ಕಚ್ಛಾ ಬೆಳ್ಳಿ ಕಾಣಿಕೆಯಾಗಿ ಬಂದಿದೆ.
ದೇವಾಲಯ ಸಿಬ್ಬಂದಿ ಬೆಳಗ್ಗೆಯಿಂದ ಹುಂಡಿ ಎಣಿಕೆ ಮಾಡಿದ್ದು ರಾತ್ರಿ ವೇಳೆಗೆ ಪೂರ್ಣಗೊಂಡಿತು ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿಇಒ ಪ್ರಕಾಶರಾವ್ ಎಂ.ಎಚ್.ತಿಳಿಸಿದ್ದಾರೆ.