ಕೊಪ್ಪಳ: ಇಂದಿಗೂ ಜನರಿಗೆ ದೊಡ್ಡ ಬ್ಯಾಂಕುಗಳು ನೆರವಾಗುತ್ತಿಲ್ಲ. ಬದಲಿಗೆ ಸೌಹಾರ್ದ ಸಹಕಾರಿಗಳು ಜನ ಸಾಮಾನ್ಯರ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕ ಜಿ.ಶ್ರೀಧರ ಹೇಳಿದರು.
ನಗರದ ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ಜಿಲ್ಲೆಯ ಸೌಹಾದ್ ಸಹಕಾರಿಗಳ ಸಿಇಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಹಣಕಾಸು ಕ್ಷೇತ್ರ ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಅದರ ಹಿಂದೆ ಮೋಸದ ಜಾಲಗಳು ಹಿಂಬಾಲಿಸುತ್ತಿವೆ. ಸೈಬರ್ ಕೆಂ ಬಗ್ಗೆ ನಾವೆಲ್ಲ ಎಚ್ಚರದಿಂದ ಇರಬೇಕು. ಅದಕ್ಕಾಗಿಯೇ ಸೈಬರ್ ಕೆಂ ಬಗ್ಗೆಯೇ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಡಿವೈಎಸ್ಪಿ ಯಶವಂತ ಕುಮಾರ್ ಎಸ್.ಬಿ.ಮಾತನಾಡಿ, ಜಿಲ್ಲೆಯಲ್ಲಿ ನಿತ್ಯ ಹಲವರು ಸೈಬರ್ ಕೆಂಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಜಾಗ್ರತೆಯಿಂದ ಆನ್ಲೈನ್ ವ್ಯವಹಾರ ಮಾಡಬೇಕಿದೆ. ಈ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಅಸುರತ ಜಾಲತಾಣ, ಆ್ಯಪ್ ಬಳಕೆ ಮಾಡಬಾರದು. ಅಧಿಕೃತ ಮಾಹಿತಿ ಇದ್ದಾಗಲಷ್ಟೇ ಮುಂದುವರೆಯಬೇಕು. ನೀವು ತಿಳಿವ ಜತೆಗೆ ಇತರರಿಗೂ ತಿಳಿಸಿ ಎಂದರು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಚನ್ನಪ್ಪ ಕಡ್ಡಿಪುಡಿ, ಉಪಾಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ನಿರ್ದೇಶಕರಾದ ಶಂಕರಗೌಡ ಹಿರೆಗೌಡ, ಗವಿಸಿದಯ್ಯ ಲಿಂಗಯಬಸನಯ್ಯಮಠ, ಮುದ್ದಪ್ಪ ಬೆವೀನಹಳ್ಳಿ , ನಾಗರಾಜ, ಪ್ರಮುಖರಾದ ಚಂದ್ರಶೇಖರ್, ನವೀನ್, ಸಾತ್ವಿಕ್, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ ಧರಣೆ ಇತರರಿದ್ದರು.