BASAVARAJ RAYARADDI 
ಜಿಲ್ಲೆ

ಜಾತಿ ಗಣತಿ ವರದಿ ಜಾರಿ ಮಾಡಲಿ

  • ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಆಗ್ರಹ

ಕೊಪ್ಪಳ: ಜಾತಿ ಗಣತಿ ವರದಿ ಒಪ್ಪಿಕೊಂಡು ಸಂಪುಟದಲ್ಲಿ ಮಂಡಿಸಿ ಅನುಮೋದಿಸಬೇಕೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸರ್ಕಾರಕ್ಕೆ ಆಗ್ರಹಿಸಿದರು.

ತಾಲೂಕಿನ ಬಸಾಪುರ ಖಾಸಗಿ‌ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಾರದ ಹಿಂದೆ ಸಿಎಂ ಅವರನ್ನು ಭೇಟಿ ಮಾಡಿ‌ ಎರಡು ಗಂಟೆಗೂ ಹೆಚ್ಚುಕಾಲ ಚರ್ಚಿಸಿರುವೆ. ಇದೇ ವಾರ ಅಥವಾ ಇಂದು ನಡರವ ಸಿಂಧನೂರು ಕಾರ್ಯಕ್ರಮದಲ್ಲಾದರೂ ಘೋಷುಸಬೇಕು. ಹಿಂದೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ‌ ಕಾಂತರಾಜ ನೇತೃತ್ವದಲ್ಲಿ ಸಾಮಾಜಿಕ, ಆರ್ಥಿಕ, ಜಾತಿವಾರು ಜನಗಣತಿ ನಡೆಸಲಾಗಿದೆ. 2018 ರಲ್ಲಿ ಸಮಿತಿ ವರದಿ ಪೂರ್ಣಗೊಳಿಸಿತು. ಆದರೆ, ಕಾರ್ಯದರ್ಶಿ ಸಹಿ ಮಾಡಲಿಲ್ಲ ಎಂಬ ಕಾರಣಕ್ಕೆ ವರದಿ ಸ್ವೀಕಾರ ಆಗಲಿಲ್ಲ. ಮುಂದೆ ಬಂದ ಸರ್ಕಾರಗಳು ವರದಿ ಸ್ವೀಕರಿಸಲಿಲ್ಲ. ಇತ್ತೀಚೆಗೆ ಸಿಎಂ ವರದಿ ಜಾರಿ ಮಾಡುವ ಮಾತಾಡಿದ್ದಾರೆ. ಸಾಮಾಜಿಕ ಬದ್ಧತೆ ಇರುವ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು‌. ಮುಂದೆ ಬರುವವರು ವರದಿ ಜಾರಿ ಮಾಡುವ ಭರವಸೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ವರದಿ ಸ್ವೀಕರಿಸಿ, ಅನುಮೋದಿಸಿ ಜಾರಿ ಮಾಡಲಿ. ಸಾಧ್ಯವಾದರೆ ನವೆಂಬರ್ ನಿಂದ ಅನುಷ್ಠಾನಕಕ್ಕೆ ಬರುವಂತಾದರೆ ಇನ್ನೂ ಅನುಕೂಲವಾಗಲಿದೆ ಎಂದರು.

ಇದರಿಂದ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಯೋಜನೆ ರೂಪಿಸಲು ಅನುಕೂಲ. ಒಳ ಮೀಸಲಾತಿ ಅನುಷ್ಠಾನಕ್ಕೂ ಪಾಉರಕವಾಗಲಿದೆ‌. ಸುಪ್ರೀಂ ಕೋರ್ಟ್ ಸಹ ಯಾವ ಜಾತಿ ಜನರಿಗೆ ಏನೇನೂ ಅನುಕೂಲ ಕಲ್ಪಿಸಲಾಗಿದೆ ಎಂದು ಪ್ರಶ್ನಿಸಿದೆ. ನಮ್ಮ ವರದಿ ಅದಕ್ಕೆ ಪೂರಕವಾಗಿದೆ. ಇದರಿಂದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಅನುಕೂಲವಾಗಲಿದೆ. ಸಿಎಂ ಇದನ್ನು ತಡ ಮಾಡದೇ ಜಾರಿ ಮಾಡಲಿ. ವರದಿ ಬಿಡುಗಡೆಯಾದರೆ ತಾನೆ ಅದರಲ್ಲಿ ಏನಿದೆ ಎಂದು ತಿಳಿಯುತ್ತದೆ. ಕಾನೂನು ತೊಡಕು ಇರಬಹುದು. ವರದಿ ಬಹಿರಂಗ ಆದರೆ ಗೊತ್ತಾಗಲಿದೆ. ವರದಿ ಜಾರಿ ಮಾಡುವುದರಿಂದ ಅಧಿಕಾರ ಹೋಗುತ್ತೆ ಅಥವಾ ಸಿಗುತ್ತೆ ಎನ್ನುವುದು ಮುಖ್ಯ ಅಲ್ಲ. ಇದರಿಂದ ಕಾಂಗ್ರೆಸ್ ಗೆ ಲಾಭ, ನಷ್ಟ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂಗೆ ಯಾವುದೇ ಭಯ ಇಲ್ಲ. ಅವರು ಕಾನೂನು ಮೀರಿಲ್ಲ. ಬಾಕಿ ಮೂರುವರೆ ವರ್ಷ ಅವರೇ ಸಿಎಂ ಆಗಿರಲಿ. ಅವರ ಪತ್ನಿ ಪತಿಗೆ ಆಗುತ್ತಿರುವ ಅವಮಾನ ತಾಳದೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಇಲ್ಲ.‌ ಪ್ರಸ್ತುತ ರಾಜಕಾರಣದಲ್ಲಿ ಘಟಿಸುತ್ತಿರುವ ಘಟನೆ ನೋಡಿ ಒಂದು ವರ್ಷ ಅಧಿಕಾರ ನೀಡಿ ಎಂದಿರಬಹದು. ಆದರೆ, ಬಾಕಿ ಮೂರುವರೆ ವರ್ಷ ಅವರೇ ಸಿಎಂ ಆಗಿರಲಿ ಎಂಬುದು ನಮ್ಮ ಆಶಯ. ಅವರು ರಾಜೀನಾಮೆ ನೀಡಿದರೆ ನಾನೂ ಒಬ್ಬ ಸಿಎಂ ಆಕಾಂಕ್ಷಿ ಎಂದು ಈ ಹಿಂದೆ ಹೇಳಿರುವೆ ಅಷ್ಟೇ ಎಂದು ಸಮರ್ಥಿಸಿಕೊಂಡರು.