BASAVARAJ RAYARADDI 
ಜಿಲ್ಲೆ

ನಾನು ಸಿಎಂ ಸ್ಥಾನದ ಆಕಾಂಕ್ಷಿ, ಬಸವರಾಜ ರಾಯರಡ್ಡಿ ಹೇಳಿಕೆ

Kopala - Raveendra V K

ಕೊಪ್ಪಳ: ರಾಜ್ಯದಲ್ಲಿ ಬೇರೆಯವರು ಸಿಎಂ ಆಗಬೇಕೆಂದು ಆಸೆ ಪಡುತ್ತಿದ್ದಾರೆ. ಆದರೆಣ ಸಿಎಂ‌ಸ್ಥಾನ ಖಾಲಿ ಇಲ್ಲ. ನಾನೂ ಸಿಎಂ ಸ್ಥಾನದ ಆಕಾಂಕ್ಷಿ. ಕಲ್ಯಾಣ ಕರ್ನಾಟಕ ಭಾಗಕ್ಕೆ‌ ಆದ್ಯತೆ ನೀಡಿದಲ್ಲಿ ನಾನೇ ಫ್ರಂಟ್ ರನ್ನರ್ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ಸಿಎಂ ಆಗಿರಬೇಕು. ಅಂದ್ರೆ ರಾಜ್ಯ ಅಭಿವೃದ್ಧಿ ಆಗತ್ತೆ. ಅವರು ಮುಂದುವರೆಯಬೇಕು ಅಂತ ನಮ್ಮ ಆಸೆ. ಅವರು ಸಿಎಂ ಸೀಟ್ ನಿಂದ ಇಳಿತಾರೆ ಅಂತ ಯಾರು ಹೇಳಿದ್ದು?ಯಾರು ಆಸೆ ಪಡುವ ಅವಶ್ಯಕತೆ ಇಲ್ಲ.

ಆರ್.ವಿ.ದೇಶಪಾಂಡೆ ಅವರು ಹೇಳಿದ್ದು ತಪ್ಪೇನಿಲ್ಲ.‌ ಸಿದ್ದರಾಮಯ್ಯ ಹೇಳಿದ್ರೆ ಸಿಎಂ ಆಗ್ತಿನಿ ಅಂತ ಹೇಳಿದ್ದಾರೆ. ಯಾರೇ ಆಗಲಿ ಸಿಎಂ ಆಗಲು ಆಸೆ ಪಟ್ಟರೆ ತಪ್ಪೇನಿಲ್ಲ. ನಾನು ಯಾಕೆ ಸಿಎಂ ಆಗಬಾರದು ? ನಾನು ಕೂಡ ಲಿಂಗಾಯತ ನಾಯಕ. ನಾನ ಯಾಕೆ ಆಗಬಾರದು ? ನಾನು ಬಿ.ಆರ್ .ಪಾಟೀಲ್ ಇಬ್ಬರು ಸೀನಿಯರ್.‌ ಹೆಚ್ಚು ಬಾರಿ ಆಯ್ಕೆ ಆಗಿರೋದು ನಾನು. ಲಿಂಗಾಯತರಿಗೆ ನೀಡುವುದಾದರೆ ನನ್ನನ್ನು ಪರಿಗಣಿಸಲಿ ಎಂದು ಸೋಮವಾರ ಸುದ್ದಿಗಾರರಿಗೆ ಹೇಳಿದರು.

ನನಗೆ ಯಾವುದೆ ಮುಜುಗರ ಇಲ್ಲ. ಮೊದಲೆ ನಾನು ಹೇಳಿದ್ದೆ‌ನೆ. ಖರ್ಗೆ ಅವರು ಪ್ರಧಾನ ಮಂತ್ರಿ ಆಗಲಿ ಅಂತ ನಾನು ಆಸೆ ಪಟ್ಟವನು. ನಾನು ಹಿರಿಯ ನಾಯಕ ಇರುವ ಕಾರಣ ಸಿಎಂ ಆಗಬೇಕೆಂದು ಆಸೆ ಪಡುತ್ತಿದ್ದೇನೆ. ನಮ್ಮ ಪಕ್ಷ ಹಾಗೂ ಸಿದ್ದರಾಮಯ್ಯ ಮನಸ್ಸು ಮಾಡಬೇಕು. ಯಾವಾಗ ಯಾರು ಏನಾಗ್ತಾರೆ ಅಂತ ಗೊತ್ತಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು.