ಜಿಲ್ಲೆ

ಬಿದಿರು ಬಳಸಿ, ಪ್ಲಾಸ್ಟಿಕ್ ನಿಷೇಧಿಸಿ; ಕರಕುಶಲ ತರಬೇತುದಾರ ಪ್ರಕಾಶ ಮೇದಾರ ಮನವಿ

Koppal

ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ

ಕೊಪ್ಪಳ: ವಾತಾವರಣಕ್ಕೆ ಪ್ಲಾಸ್ಟಿಕ್ ಮಾರಕ. ಅದರ ಬದಲು ಬಿದಿರಿನ ವಸ್ತುಗಳ ಬಳಕೆಯಿಂದ ಪರಿಸರ ಉಳಿಸಬಹುದು ಎಂದು ಕರಕುಶಲ ತರಬೇತುದಾರ ಪ್ರಕಾಶ ಮೇದಾರ ಹೇಳಿದರು.

ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಬಿದಿರು ದಿನದ ಅಂಗವಾಗಿ ಕರಕುಶಲ ಕೈಗಾರಿಕಾ ಮೇದಾರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕಮದಲ್ಲಿ ಮಾತನಾಡಿದರು. ಮೇದಾರ ಸಮುದಾಯವು ಹಿಂದಿನಿಂದಲೂ ಬಿದಿರಿನ ವಸ್ತುಗಳನ್ನು ತಯಾರಿಸುತ್ತಿದೆ. ಆದರೆ, ಆಧುನಿಕತೆ ಭರಾಟೆಯಲ್ಲಿ ಕಲೆಗಳು ಮಂಕಾಗಿವೆ. ಸದ್ಯ ಪ್ಲಾಸ್ಟಿಕ್ ಮಾರಕ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಸರ್ಕಾರವೂ ಪ್ಲಾಸ್ಟಿಕ್ ಬಳಕೆ ತಪ್ಪಿಸಲು ಕಸರತ್ತು ನಡೆಸುತ್ತಿದೆ. ಕಸದಬುಟ್ಟಿ, ಟೇಬಲ್, ಹೂಬುಟ್ಟಿ, ಅಲಂಕಾರಿಕ ವಸ್ತುಗಳು, ಕೀ ಚೈನ್ ಮೊದಲಾದವನ್ನು ಬಿದಿರಿನಿಂದ ತಯಾರಿಸಬಹುದು. ಸರ್ಕಾರಿ ಕಚೇರಿಗಳಲ್ಲಿ ಮೊದಲು ಪರಿಸರ ಪೂರಕ ವಸ್ತುಗಳ ಬಳಕೆಯಾಗಬೇಕು. ಪರ್ಯಾಯ ಮಾರುಕಟ್ಟೆ, ಅಗತ್ಯ ಬಿದಿರು ಕಲ್ಪಿಸಿದಲ್ಲಿ ಮೇದಾರ ಕುಟುಂಬಗಳಿಗೂ ಜೀವನವಾಗಲಿದೆ ಎಂದರು. ತ

ರಬೇತಿಯಲ್ಲಿ ಮಹಿಳೆಯರು ಹಲವು ವಸ್ತುಗಳನ್ನು ತಯಾರಿಸಿದರು. ಸಂಘದ ವಿಜಯಲಕ್ಷ್ಮೀ ಮೇದಾರ, ದೀಪಾ ಮೇದಾರ, ಲಕ್ಷ್ಮೀ, ರಾಧಾ, ಶೀಲಾ, ಗುಂಡಮ್ಮ, ವೈಶಾಲಿ, ರೇಣುಕಾ, ಗಂಗಮ್ಮ , ಉಮಾ, ವಿಣಾ ಸೇರಿ ಇತರರಿದ್ದರು.