ವಿದ್ಯಾದಾಸ್ ಬಾಬಾ 
ಜಿಲ್ಲೆ

ಅಂಜನಾದ್ರಿಯಲ್ಲಿ ಹನುಮ ಜನ್ಮ ಮಹೋತ್ಸವಕ್ಕೆ 200ಕ್ಕೂ ಅಧಿಕ ಸಂತರ ಆಗಮಿಸುವುದಾಗಿ ಹೇಳಿದ ವಿದ್ಯಾದಾಸ್ ಬಾಬಾ

ಕೊಪ್ಪಳ: ಹನುಮ ಜಯಂತಿ ಅಂಗವಾಗಿ ಏ.13 ರಿಂದ 21ವರೆಗೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜನ್ಮ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ವಿದ್ಯಾದಾಸ್ ಬಾಬಾ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಬಾರಿ ವಿಶೇಷವಾಗಿ ಜಯಂತಿ ಆಚರಿಸಲಾಗುವುದು. ಭಕ್ತರಿಗಾಗಿ ಉಚಿತವಾಗಿ ಕುಂಕುಮಾರ್ಚನೆ ಮಾಡಿ ಪ್ರಸಾದ ಕಳಿಸಲಾಗುವುದು. ಅಯೋಧ್ಯೆ, ಚಿತ್ರಕೂಟ, ಕಾಶಿ, ಗಂಗೋತ್ರಿ, ಹರಿದ್ದಾರ, ಋಷಿಕೇಶ, ಮಥುರಾ ಸೇರಿ ಇತರ ಶಕ್ತಿ ಪೀಠಗಳಿಂದ 200ಕ್ಕೂ ಅಧಿಕ ಸಂತರು ಆಗಮಿಸಲಿದ್ದಾರೆ. ಏ.13ರಂದು ಕುಂಭಯಾತ್ರೆ ನಡೆಸಲಾಗುವುದು. ಜತೆಗೆ ರಾಮಾಯಣ ಪಠಣವು ಆರಂಭವಾಗಲಿದೆ. ಏ.16ರ ಜಯಂತಿಯಂದು ಬೆಳಗೆ 1ಗಂಟೆಗೆ ಗಂಗಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಕುಂಕುಮಾರ್ಚನೆ, ಮಹಾಮಂಗಳರಾತಿ ನೆರವೇರಿಸಲಾಗುವುದು. ಮಧ್ಯಾಹ್ನ 12ಗಂಟೆ ನಂತರ ಮಹಾ ಪ್ರಸಾದ ವ್ಯವಸ್ಥೆ ಇರಲಿದೆ ಎಂದರು.

ಬಳಿಕ 21ವರೆಗೆ ವಿಷೇಷ ಪೂಜೆಗಳು ನೆರವೇರಲಿವೆ. ಈ ಬಾರಿ ಒಂದು ಲಕ್ಷದ ಹನ್ನೊಂದು ಸಾವಿರದ ಒಂದು ನೂರ ಒಂದು ಜನರ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಲು ನಿರ್ಧರಿಸಲಾಗಿದೆ. ಭಕ್ತರು 9449482494, 9448881451 ಸಂಖ್ಯೆಗೆ ತಮ್ಮ ಹೆಸರು, ನಕ್ಷತ್ರ, ಗೋತ್ರ ವಿವರಗಳನ್ನು ಕಳಿಸಬೇಕು. ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿಳಾಸಕ್ಕೆ ಉಚಿತವಾಗಿ ಪ್ರಸಾದ ಕಳಿಸಿಕೊಡಲಾಗುವುದು. ದೇವಾಲಯ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿದ್ದು, ಹನುಮ ಜನ್ಮ ಮಹೋತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಶ್ರೀರಾಮಸೇನೆ ವಿಭಾಗೀಯ ಅಧ್ಯಕ್ಷ ಸಂಜು ಮರಡಿ, ವಿಜಯನಗರ ಜಿಲ್ಲಾಧ್ಯಕ್ಷ ಜಗದೀಶ ಕಮಟಗಿ ಇದ್ದರು.