ಕೊಪ್ಪಳ: ಅಗ್ನೀವಿರ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬೆಳಗಾವಿ ಎ.ಆರ್.ಓ ಅಡಿಯಲ್ಲಿ ಬರುವ ಎಲ್ಲಾ ಜಿಲ್ಲೆಯ ಯುವಕರಿಗೆ ದೈಹಿಕ ಮತ್ತು ವೈದ್ಯಕಿಯ ಡೆಮೋ ರ್ಯಾಲಿ ಸೆ.22 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ರ್ಯಾಲಿಯಲ್ಲಿ 200ಕ್ಕೂ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಿದಲ್ಲಿ ಮಾತ್ರ ಶೀಘ್ರದಲ್ಲಿ 60 ದಿನಗಳ ತರಬೇತಿಯನ್ನು ಪ್ರಾರಂಭಿಸಲಾಗುವುದು. ಬೆಳಗ್ಗೆ ಮತ್ತು ಸಾಯಂಕಾಲ ಫಿಜಿಕಲ್ ತರಬೇತಿ ಮತ್ತು ವಾರದಲ್ಲಿ ಒಂದು ದಿನ ಡೆಮೋ ರ್ಯಾಲಿ ಆಯೋಜಿಸಲಾಗುವುದು.
ನುರಿತ ಮಾಜಿ ಸೈನಿಕರು ಮತ್ತು ಇನ್ಸ್ಪೆಕ್ಟರ್ ಮತ್ತ ಅಥ್ಲೆಟಿಕ್ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಭಾಗವಹಿಸಿದವರಿಗೆ ಉಚಿತ ಊಟ ಮತ್ತು ವಸತಿ ಸಹಿತ ಇದ್ದು, ಡೆಮೋ ರ್ಯಾಲಿ ಹಿಂದಿನ ದಿನ ವಸತಿ ಸೌಲಭ್ಯ ಇರುತ್ತದೆ.ಸಸ ಆಸಕ್ತ ಅರ್ಹ ಅಭ್ಯರ್ಥಿಗಳು ಡೆಮೋ ರ್ಯಾಲಿಯಲ್ಲಿ ಭಾಗವಹಿಸಲು ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ನಕಲು ಪ್ರತಿ, ಫೋಟೋ, ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವನಾಥ ಕರ್ಲಿ ದೂ: 9620084611, 8660455969 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.