ಜಿಲ್ಲೆ

ಗ್ರಾಪಂ ವ್ಯಾಪ್ತಿಯಲ್ಲಿ ‘ಕೂಸಿನ ಮನೆ’

ಸೋಮನಾಥ ರೆಡ್ಡಿ

ನರಗುಂದ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ ಪ್ರಾರಂಭವಾಗಲಿವೆ ಎಂದು ಶಿಶು ಅಭಿವೃದ್ಧಿ ನರಗುಂದ ತಾಲೂಕು ಯೋಜನಾಧಿಕಾರಿ ರೂಪಾ ಗಂಧದ ಹೇಳಿದರು.

ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಆ.1ರಿಂದ 7ರ ವರೆಗೆ ತಾಲೂಕಿನ ವಿವಿಧೆಡೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ಚಿಕ್ಕನರಗುಂದ ಗ್ರಾಂಪಂ ಅಧ್ಯಕ್ಷೆ ಮಲ್ಲಮ್ಮ ಮರಿಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಂಪಂ ಉಪಾಧ್ಯಕ್ಷೆ ಈರಮ್ಮ ಮುದಿಗೌಡ್ರ, ಮುತ್ತು ರಾಯರಡ್ಡಿ, ಶ್ರುತಿ ಬ್ಯಾಳಿ, ಲಕ್ಷ್ಮೀ ಚೆನ್ನಪ್ಪಗೌಡ್ರ, ಶರಾವತಿ ಹಿರೇಮಠ, ಅನ್ನಪೂರ್ಣಾ ಹಡಪದ ಇತರರಿದ್ದರು. ಭಾರತಿ ಪಾಟೀಲ, ಮಂಜುಳಾ ಮೇಟಿ, ಗೀತಾ ಕಾಡದೇವರಮಠ ನಿರ್ವಹಿಸಿದರು.