ಜಿಲ್ಲೆ

ಸಮಸ್ಯೆಗಳ ಆಗರವಾದ ಕೂರಿಗೇಪಲ್ಲಿ ಗ್ರಾಪಂ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಕೂರಿಗೇಪಲ್ಲಿ ಗ್ರಾಪಂ ವ್ಯಾಪ್ತಿಯ ಎ.ಕೊತ್ತೂರು ಗ್ರಾಮದಲ್ಲಿ

ಮೂಲ ಸೌಲಭ್ಯಗಳ ಕೊರತೆ ಸೇರಿ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಗ್ರಾಮದ ಜನರಿಗೆ ರೋಗ ರುಜಿಗಳ ಭೀತಿ ಎದುರಾಗಿದೆ. ಗ್ರಾಮದಲ್ಲಿ ಸಂಗ್ರಹವಾಗುವ ಕಸವನ್ನು ಗ್ರಾಪಂ ಸಂಗ್ರಹಿಸುತ್ತಿಲ್ಲ ಇದರಿಂದ ಜನ ಎಲ್ಲೆಂದರಲ್ಲಿ ಕಸ ಎಸೆಯುವ ದುಸ್ಥಿತಿ ನಿರ್ಮಾಣವಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸ್ವಚ್ಛತಾ ನೈರ್ಮಲ್ಯ ಕಾಪಾಡುವುದರಲ್ಲಿ ಅಧಿಕಾರಿಗಳು ರ್ನಿಲಕ್ಷ$್ಯ ವಹಿಸುತ್ತಿದ್ದಾರೆ. ಎ.ಕೊತ್ತೂರು ಗ್ರಾಮಕ್ಕೆ ಒಂದು ಬಾರಿಯೂ ಕಸ ವಲೇವಾರಿ ವಾಹನ ಆಗಮಿಸಿಲ್ಲ. ಆದರೂ ಕಸದ ವಾಹನ ಬಂದ ಹಾಗೆ ಎಂಟು ಸಾವಿರದಿಂದ 9 ಸಾವಿರ ರೂ. ಬಿಲ್​ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ವಾರಕ್ಕೊಂದು ಬಾರಿ ಗ್ರಾಮದಲ್ಲಿನ ಚರಂಡಿ ಸ್ವಚ್ಛಗೊಳಿಸುವುದಿಲ್ಲ. ಇದರಿಂದಾಗಿ ಚರಂಡಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿ ರಸ್ತೆಯ ಮೇಲೆ ಹರಿಯುವುದು ಮತ್ತು ಚರಂಡಿಯಲ್ಲೇ ನಿಂತು ಗಬ್ಬು ವಾಸನೆ ಬರುತ್ತಿದೆ. ಇಷ್ಟಲ್ಲದೇ ಸೊಳ್ಳೆಗಳ ಉತ್ಪತ್ತಿಯಿಂದ ಸ್ಥಳಿಯರನ್ನು ರೋಗಗಳು ಆವರಿಸುತ್ತವೆ.

ನರೇಗಾ ಕಾಮಗಾರಿಗಳು ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಯೋಜನೆ. ಆದರೆ ನರೇಗಾ ಕಾಮಗಾರಿಗಳಲ್ಲಿ ಎನ್​ಎಂಆರ್​ ತೆಗೆಯಲು ಡೇಟಾ ಆಪರೇಟರ್​ ಫೋನ್​ ಪೇ ಮೂಲಕ ಲಂಚ ಪಡೆದು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ನರೇಗಾ ಕಾಮಗಾರಿ ಎನ್​ಎಂಆರ್​ ತೆಗೆಯಲು ಎರಡು ಸಾವಿರದಿಂದ ಐದು ಸಾವಿರದವರೆಗೂ ಲಂಚ ನೀಡಬೇಕು ಇಲ್ಲವಾದರೆ, ಎನ್​ಎಂಆರ್​ ತೆಗೆಯುವುದಿಲ್ಲ , ಫೋನ್​ ಪೇ ಮೂಲಕ ಮುಂಚಿತವಾಗಿ ಹಣ ನೀಡಿದರೆ ಮಾತ್ರ ತೆಗೆಯುತ್ತಾರೆ. ಇನ್ನು ಈ ವಿಚಾರವಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಕೆ.ಎನ್​.ವಿಶ್ವನಾಥ್​ ಆರೋಪಿಸಿದ್ದಾರೆ.

ದಾಖಲೆಗೆ ಸೀಮಿತವಾದ ಸ್ವಚ್ಛ ಭಾರತ್​

ವಾತಾವರಣ ಆರೋಗ್ಯವಾಗಿದ್ದರೆ ಮಾತ್ರ ಗ್ರಾಮದ ಜನರು ಆರೋಗ್ಯವಾಗಿರುತ್ತಾರೆ. ಆದರೇ ಪ್ರಕೃತಿ ಒಂದು ಸಾರಿ ಮುನಿದರೇ, ಮಾರಣಾಂತಿಕ ರೋಗಗಳು ಸುತ್ತಲಿನ ಪರಿಸರವನ್ನು ನಿಧಾನವಾಗಿ ಆವರಿಸುತ್ತವೆ. ಅವುಗಳಿಗೆ ಡೆಂ, ಚಿಕೂನ್​ಗೂನ್ಯಾ ಹಾಗೂ ಇತ್ತೀಚೆಗೆ ಕಾಣಸಿಗುತ್ತಿರುವ ರೋಗಗಳೆ ಸಾಯಾಗಿವೆ. ಒಟ್ಟಿನಲ್ಲಿ ಸ್ವಚ್ಛ ಭಾರತ್​ ಯೋಜನೆ ಈ ಗ್ರಾಪಂಗಳಲ್ಲಿ ಮಾತ್ರ ದಾಖಲೆಗಳಿಗೆ ಸೀಮಿತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.