ನರಗುಂದ: ತಾಲೂಕಿನ ಕೊಣ್ಣೂರ ಗ್ರಾಪಂ 2ನೇ ಅವಧಿಯ ನೂತನ ಅಧ್ಯಕ್ಷೆ ಸ್ಥಾನಕ್ಕೆ ಗುರುವಾರ ಚುನಾವಣೆ ಜರುಗಿತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಯಶ್ರೀ ಶಿವಪ್ಪಯ್ಯನಮಠ 14 ಮತಗಳನ್ನು ಪಡೆದು ಜಯಶಾಲಿಯಾದರು. ಪ್ರತಿಸ್ಪರ್ಧಿ ಗೀತಾ ಕುರಹಟ್ಟಿ 10 ಮತಗಳನ್ನು ಪಡೆದು ಪರಾಭವಗೊಂಡರು. ಒಟ್ಟು 25 ಸದಸ್ಯರ ಪೈಕಿ 24 ಸದಸ್ಯರು ಚುನಾವಣೆಯಲ್ಲಿ ಉಪಸ್ಥಿತರಿದ್ದರು ಎಂದು ಚುನಾವಣಾಧಿಕಾರಿ, ತಾಪಂ ಇಒ ಎಸ್.ಕೆ. ಇನಾಮದಾರ ತಿಳಿಸಿದರು.
ನೂತನ ಗ್ರಾಪಂ ಅಧ್ಯಕ್ಷೆ ಜಯಶ್ರೀ ಶಿವಪ್ಪಯ್ಯನಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಣ್ಣೂರ ಗ್ರಾಪಂ ಸರ್ವ ಸದಸ್ಯರು, ಗ್ರಾಮಸ್ಥರ ವಿಶ್ವಾಸ ಪಡೆದು ಗ್ರಾಮದ ಸ್ವಚ್ಛತೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಬಿದಿ ದೀಪಗಳ ನಿರ್ವಹಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ತಾಪಂ ಇಒ ಎಸ್.ಕೆ. ಇನಾಮದಾರ ಮಾತನಾಡಿ, ಸರ್ವ ಸದಸ್ಯರೂ ಸರ್ಕಾರದ ಪ್ರತಿಯೊಂದು ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಪಡಬೇಕು. ನಿಗದಿತ ಅವಧಿಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದು ಮಹತ್ವದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಬೇಕು ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಸಂಕನಗೌಡ ಪಾಟೀಲ, ಸದಸ್ಯರಾದ ಮಲ್ಲನಗೌಡ ಯಲ್ಲಪ್ಪಗೌಡ್ರ, ಬೀಬಿಜಾನ್ ನರಗುಂದ, ಭೀಮಪ್ಪ ಹೊರಕೇರಿ, ಹನುಮಂತ ಅಣ್ಣಿಗೇರಿ, ಸಿದ್ಧರಾಜ ಅಣ್ಣಿಗೇರಿ, ಹುಸೇನಬಿ ಬುರಡಿ, ಪ್ರಕಾಶ ಚಂದಣ್ಣವರ, ಚಾಂದಬೀಬಿ ಸನ್ನಿ, ಮಮತಾಜಬೇಗಂ ಕುರ್ಲಗೇರಿ, ಗೂಳಪ್ಪ ಹುಜರತ್ತಿ, ಪಿಡಿಒ ಮಂಜುನಾಥ ಗಣಿ, ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚಚನಗೌಡ್ರ, ಉಮೇಶ ಹಿರೇಹೊಳಿ, ಅಶೋಕ ಕಾಮಣ್ಣವರ, ಬಸವರಾಜ ವಾಸನ, ಸುನೀಲ ಕಳಸಣ್ಣವರ, ಇಸಾಕ್ ಮಸೂತಿಮನಿ, ಶೌಕತಲಿ ಸನ್ನಿ, ಬಸಯ್ಯ ಹೊರಗಿನಮಠ, ಈರಣ್ಣ ಖೋದಾನಪೂರ, ಬಾಪುಗೌಡ ಪಾಟೀಲ, ಬಸವರಾಜ ಶೆಲ್ಲಿಕೇರಿ, ಸಿದ್ದಮ್ಮ ಕಳಸಣ್ಣವರ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.