ಕಲಾಂಗಣದಲ್ಲಿ ನಿಮ್ಣೆಂ ಉತರ್ ಕೊಂಕಣಿ ನಾಟಕ ಪ್ರದರ್ಶನ
ಮಂಗಳೂರು : ಮಾಂಡ್ ಸೊಭಾಣ್‌ನ ಮಾಸಿಕ ರಂಗಭೂಮಿ ಸರಣಿ ಕಾರ್ಯಕ್ರಮದ ಅಂಗವಾಗಿ ಶಕ್ತಿನಗರದ ಕಲಾಂಗಣದಲ್ಲಿ
ಮಾಂಡ್ ತಂಡದವರಿಂದ ವಿದ್ದು ಉಚ್ಚಿಲ್ ನಿರ್ದೇಶನದ ನಿಮ್ಣೆಂ ಉತರ್ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.
ಗೋವಾದ ಕೊಂಕಣಿ ಮುಖಂಡ ಗೌರೀಶ್ ವೆರ್ಣೇಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭ ಮಾಂಡ್ ಸೊಭಾಣ್ ನಿರ್ಮಾಣದ ಕೊಂಕಣಿ ಚಲನಚಿತ್ರ ಅಸ್ಮಿತಾಯ್ ಇದರ ಹಾಡುಗಳ ಆಡಿಯೋವನ್ನು ಉದ್ಯಮಿ ರೊಯ್ ಕ್ಯಾಸ್ಟಲಿನೊ ಮತ್ತು ಕಸ್ಟಮ್ಸ್ ಅಧಿಕಾರಿ ಸ್ಟೀವನ್ ಡಯಾಸ್ ಬಿಡುಗಡೆ ಮಾಡಿದರು.
ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೆರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ಸಂಘಟಕ ಸ್ಟ್ಯಾನಿ ಅಲ್ವಾರಿಸ್, ಚಲನಚಿತ್ರದ ಪ್ರಮುಖ ಪಾತ್ರಧಾರಿಗಳಾದ ಡೆನಿಸ್ ಮೊಂತೆರೊ, ಅಶ್ವಿನ್ ಡಿಕೋಸ್ತಾ, ವೆನ್ಸಿಟಾ ಡಾಯಸ್, ನೆಲ್ಲು ಪೆರ್ಮನ್ನೂರ್, ಸಂಗೀತ ನಿರ್ದೇಶಕ ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಉಪಸ್ಥಿತರಿದ್ದರು.
ಸವಿತಾ, ಅಮ್ರಿನ್ ಕ್ರಿಸ್ಟನ್ ಮತ್ತು ವಿಕಾಸ್ ಅಭಿನಯದ ನಿಮ್ಣೆಂ ಉತರ್ ನಾಟಕಕ್ಕೆ ಎಲ್ರೊನ್ ರಾಡ್ರಿಗಸ್ ಹಿನ್ನಲೆ ಸಂಗೀತ ನೀಡಿದರು. ಕಿಂಗ್‌ಸ್ಲಿ ನಜ್ರೆತ್ ಬೆಳಕು ಸಂಯೋಜಿಸಿದರು.