ಜಿಲ್ಲೆ

ಕೊಂಕಣಿ ಭಾಷಾ ಮಂಡಳ್‌ನ ಸುವರ್ಣ ಮಹೋತ್ಸವ

Mangaluru - Hariprasad Rai



ಮಂಗಳೂರು : ರಾಜ್ಯದ ಕೊಂಕಣಿ ಭಾಷೆಯ ಹಿರಿಯ ಸಂಸ್ಥೆ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವ ಅಚರಣೆಯ ಪೂರ್ವ ಸಿದ್ಧತಾ ಸಭೆ ನಗರದ ತಾಜ್‌ಮಹಲ್ ಸಭಾಂಗಣದಲ್ಲಿ ನಡೆಯಿತು. ಸುವರ್ಣ ಮಹೋತ್ಸವದ ಲಾಂಛನವನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರಾಗಿ ಜೊಸ್ಸಿ ಪಿಂಟೊ ಕಿನ್ನಿಗೊಳಿ, ನವೀನ್ ನಾಯಕ್ ಉಳ್ಳಾಳ, ಪೆಲ್ಸಿ ಲೋಬೊ ಮಂಗಳೂರು, ಅರವಿಂದ್ ಶಾನ್‌ಭಾಗ್ ಕುಮಟಾ ಮತ್ತು ರೊಬರ್ಟ್ ಮೆನೆಜಸ್ ಕಾರ್ಕಳ ಆಯ್ಕೆಯಾದರು. ಉಪಾಧ್ಯಕ್ಷ ರತ್ನಾಕರ ಕುಡ್ವ, ಮಾಜಿ ಅಧ್ಯಕ್ಷ ವೆಂಕಟೇಶ ಬಾಳಿಗ, ವಿಲಿಯಂ ಡಿಸೋಜ, ಪ್ರಶಾಂತ ಶೇಟ್, ಲಾರೆನ್ಸ್ ಪಿಂಟೊ, ಜಯಲಕ್ಷ್ಮಿ ಪೈ ಸಲಹೆ ಸೂಚನೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಕೆ.ವಸಂತ ರಾವ್ ಸ್ವಾಗತಿಸಿ, ಕಾರ್ಯದರ್ಶಿ ರೇಮಂಡ್ ಡಿಕುನ್ಹ ತಾಕೊಡೆ ವಂದಿಸಿದರು.