ಮಂಗಳೂರು: ಕೊಂಕಣ ರೈಲ್ವೇಯು ನಿರಂತರವಾಗಿ ಟಿಕೆಟ್ ತಪಾಸಣೆ ನಡೆಸುತ್ತಿದ್ದು, ಕಳೆದ ವರ್ಷಾಂತ್ಯ ಡಿಸೆಂಬರ್ (2023) ಒಂದೇ ತಿಂಗಳು ಅನಧಿಕೃತವಾಗಿ ಟಿಕೆಟ್ ರಹಿತ ಪ್ರಯಾಣ ನಡೆಸುತ್ತಿದ್ದ 6,675 ಪ್ರಯಾಣಿಕರಿಗೆ ಒಟ್ಟು 1,95,64,926 ರೂ. ದಂಡ ವಿಧಿಸಿದೆ.
ಕಳೆದ ತ್ರೈಮಾಸಿಕದಲ್ಲಿ (2023 ಅಕ್ಟೋಬರ್‌ನಿಂದ ಡಿಸೆಂಬರ್ ತನಕ) ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ 18,466 ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು 5,60,99,017 ರೂ ದಂಡ ವಿಧಿಸಿದ್ದಾರೆ.
ಪ್ರಯಾಣದ ನಡುವೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ಸಮರ್ಪಕ ಟಿಕೆಟ್ ಜತೆ ಪ್ರಯಾಣಿಸುವಂತೆ ಕೊಂಕಣ ರೈಲ್ವೆಯು ಪ್ರಯಾಣಿಕರಲ್ಲಿ ಮನವಿ ಮಾಡಿದೆ.