ಜಿಲ್ಲೆ

ಸ್ವಚ್ಛತೆಗೆ ಆದ್ಯತೆ ನೀಡಲು ಸಲಹೆ

Chitradurga

ಕೊಂಡ್ಲಹಳ್ಳಿ: ಮಾರಕ ರೋಗಗಳಿಂದ ದೂರವಿರಲು ಜನ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ತಾಪಂ ಇಒ ಪ್ರಕಾಶ್ ಸಲಹೆ ನೀಡಿದರು.

ಗ್ರಾಮದ ಎಕೆ ಕಾಲನಿಯಲ್ಲಿ ಗುರುವಾರ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ಸೋಪು ವಿತರಿಸಿ ಮಾತನಾಡಿದರು.

ಕರೊನಾ ಕುರಿತು ಆತಂಕ ಪಡುವ ಅಗತ್ಯವಿಲ್ಲ. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವತಿಯಿಂದ ಗ್ರಾಮಗಳ ಮನೆ ಮನೆಗೂ ಸೋಪು ವಿತರಿಸಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪಿಡಿಒ ಪ್ರಹ್ಲಾದ್, ಗ್ರಾಪಂ ಅಧ್ಯಕ್ಷೆ ಈರಕ್ಕ, ಡಾ.ಬಿ.ಶಿವಕುಮಾರ್, ಫಾರ್ಮಸಿಸ್ಟ್ ವೆಂಕಟೇಶ್ ನಾಯಕ್, ವಕೀಲ ಪ್ರದೀಪ್, ಎ.ಟಿ.ನಾಗರಾಜ್ ಇದ್ದರು.