ಕೊಂಡ್ಲಹಳ್ಳಿ: ಸಮೀಪದ ಹನುಮಂತನಹಳ್ಳಿಯಲ್ಲಿ ಮೂರು ದಿನಗಳ ಕಾಲ ಜರುಗುವ ಶ್ರೀ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಶುಕ್ರವಾರ ಗಂಗಾಪೂಜೆಯೊಂದಿಗೆ ಚಾಲನೆ ದೊರೆಯಿತು.
ಸಂಜೆ 5ಕ್ಕೆ ಗ್ರಾಮದ ಪೂರ್ಣಕುಂಭ ಮೇಳದೊಂದಿಗೆ ಶ್ರೀಸ್ವಾಮಿಯನ್ನು ಕೊಂಡೊಯ್ದು ಗಂಗಾಪೂಜೆ ನೆರವೇರಿಸಲಾಯಿತು.
ಫೆ.1ರ ಮುಂಜಾನೆ 5 ಗಂಟೆಯಿಂದ ಶ್ರೀಸ್ವಾಮಿಗೆ ರುದ್ರಾಭಿಷೇಕ, ಬಲಿಅನ್ನ ಸಮರ್ಪಣೆ, ಮಧ್ಯಾಹ್ನ 12ಕ್ಕೆ ರಥೋತ್ಸವ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ, ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಚ್.ಏಕಾಂತರೆಡ್ಡಿ, ಎಂಎಲ್‌ಸಿ ಜಯಮ್ಮ ಬಾಲರಾಜ್, ಜಿಪಂ ಸದಸ್ಯ ಓ.ಮಂಜುನಾಥ್, ತಹಸೀಲ್ದಾರ್ ಮಲ್ಲಿಕಾರ್ಜುನ್, ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ, ಗೌರಸಮುದ್ರ ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ, ತಳಕು ಠಾಣೆ ಎಸ್‌ಐ ಸತೀಶ್‌ನಾಯ್ಕ ಇತರರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.