ಜಿಲ್ಲೆ

ಕೃಷಿಕರ ಬದುಕು ಕಿತ್ತುಕೊಂಡು ಕರೊನಾ

ಕೊಂಡ್ಲಹಳ್ಳಿ: ಕರೊನಾ ಕಾರಣದಿಂದ ಕೃಷಿ ಉತ್ಪನ್ನಗಳು ಮಾರಾಟವಾಗದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮೊಗಲಹಳ್ಳಿಯ ರೈತ ತಿಮ್ಮಾರೆಡ್ಡಿ ಅಂದಾಜು 1.30 ಲಕ್ಷ ರೂ. ಖರ್ಚು ಮಾಡಿ 2 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಕಟಾವಿಗೆ ಬಂದಾಗಲೇ ಲಾಕ್‌ಡೌನ್ ಆದ್ದರಿಂದ ಫಸಲು ಖರೀದಿಯಾಗಿಲ್ಲ. ಇದರಿಂದ ಬೇಸತ್ತು ದನ, ಕುರಿ, ಮೇಕೆಗಳಿಗೆ ಮೇಯಲು ಬಿಟ್ಟಿದ್ದಾರೆ.

ಇಂತಹ ಸಂಕಷ್ಟಕ್ಕೆ ಸಿಲುಕಿರುವ ಬಹುತೇಕ ರೈತರು ಫಲಕ್ಕೆ ಬಂದ ಫಸಲನ್ನು ದನ ಕರುಗಳನ್ನು ಬಿಟ್ಟು ಮೇಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕೆಲವರು ಟ್ರಾೃಕ್ಟರ್ ಇನ್ನಿತರ ಬಾಡಿಗೆ ವಾಹನಗಳಲ್ಲಿ ಹಣ್ಣುಗಳನ್ನು ಇಟ್ಟುಕೊಂಡು ಹಳ್ಳಿಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಲಾಕ್‌ಡೌನ್ ಕೃಷಿಕರ ಬದುಕು ಕಸಿದುಕೊಂಡಿರುವುದಂತು ಸತ್ಯ.