ಜಿಲ್ಲೆ

ಆಂಧ್ರ ಗಡಿ ಗ್ರಾಮಗಳ ಸಂಪರ್ಕ ರಸ್ತೆ ಬಂದ್

Chitradurga

ಕೊಂಡ್ಲಹಳ್ಳಿ: ಕೋನಸಾಗರ ಗ್ರಾಪಂ ವ್ಯಾಪ್ತಿಯ ಆಂಧ್ರ ಗಡಿಗ್ರಾಮ ಉಡೇವು ಸಂಪರ್ಕ ರಸ್ತೆಯನ್ನು ಜೆಸಿಬಿ ಸಹಾಯದಿಂದ ಬಂದ್ ಮಾಡಲಾಯಿತು.

ಆಂಧ್ರದಲ್ಲಿ ಕರೊನಾ ಸೋಂಕು ಹೆಚ್ಚಿದ್ದು, ಇಲ್ಲಿಂದ ರಾಜ್ಯದ ಗಡಿ ಗ್ರಾಮಗಳಾದ ಉಂಡೇವು, ಕೋನಸಾಗರ, ಕೊಂಡ್ಲಹಳ್ಳಿ ಇತರ ಗ್ರಾಮಗಳಿಗೆ ಅಗತ್ಯ ಪರಿಕರ ಖರೀದಿಸಲು, ಸಾಗಿಸಲು ನಿತ್ಯ ವಾಹನಗಳು ಓಡಾಡುತ್ತಿದ್ದವು. ಈ ವಿಚಾರ ಅರಿತ ತಾಪಂ ಇಒ ಪ್ರಕಾಶ್, ಗುರುವಾರ ಜೆಸಿಬಿಯಿಂದ ಗುಂಡಿ ತೆಗೆಸಿ ಆಂಧ್ರ ಸಂಪರ್ಕ ರಸ್ತೆ ಬಂದ್ ಮಾಡಿಸಿದರು.

ಮೊಳಕಾಲ್ಮೂರು ಪಿಎಸ್‌ಐ ಎನ್.ಬಸವರಾಜ್ ಮಾತನಾಡಿ, ಆಂಧ್ರ ಗಡಿ ಗಡಿಗ್ರಾಮ ಉಡೇವು ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಆಂಧ್ರದಿಂದ ಬರುವ ವಾಹನ-ಜನ ಸಂಚಾರದ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.