ಜಿಲ್ಲೆ

ಶಾಲೆ ಸರ್ವಜನಾಂಗದ ಶಾಂತಿಯ ತೋಟ : ಸುಶೀಲಾ ಕೊಂಡಾಡಿ ಬಣ್ಣನೆ

ಕಡಬ: ಶಾಲೆ ಸರ್ವ ಜನಾಂಗದ ತೋಟ. ವಿದ್ಯೆ ನೀಡುವ ಶಾಲೆಯ ಬಗ್ಗೆ ಎಲ್ಲರಿಗೂ ಅಭಿಮಾನ ಅಗತ್ಯ. ಶಾಲೆಯನ್ನು ಪ್ರೀತಿಸಿ ಶಾಲೆಯ ಪ್ರಗತಿಗೆ ವಿದ್ಯಾಭಿಮಾನಿಗಳು ಶ್ರಮಿಸಬೇಕು ಎಂದು ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಕೊಂಡಾಡಿ ಹೇಳಿದರು.

ಕೊಂಡಾಡಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಲಂಕಾರು ಗ್ರಾಪಂ ಉಪಾಧ್ಯಕ್ಷ ರವಿ ಪೂಜಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸದಾನಂದ ಆಚಾರ್ಯ, ವಾರಿಜಾ ಕಮಿತ್ತಿಲು, ಶ್ವೇತ ಕುಮಾರ್, ಆಲಂಕಾರು ಮೂರ್ತೆದಾರರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ಕ್ಲಸ್ಟರ್ ಸಿ.ಆರ್.ಪಿ. ಪ್ರಕಾಶ್ ಬಾಕಿಲ, ಮೆಸ್ಕಾಂ ಇಂಜಿನಿಯರ್ ಪ್ರೇಮ ಕುಮಾರ್, ಉದ್ಯಮಿ ಅಶೋಕ, ಶರವೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಹರೀಶ್ ಏಂತಡ್ಕ, ಸದಸ್ಯರು ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಾಲಾ ಮುಖ್ಯಶಿಕ್ಷಕ ಜಯಂತ್ ವೈ. ಸ್ವಾಗತಿಸಿದರು. ಸಹಶಿಕ್ಷಕಿ ದಿವ್ಯಾ ವಿ. ವಂದಿಸಿದರು. ಸಹಶಿಕ್ಷಕಿ ಸೌಮ್ಯಾ ವಂದಿಸಿದರು.

ಲೈನ್‌ಮನ್ ವಿದ್ಯಾಸಾಗರ್ ಅವರನ್ನು ಸನ್ಮಾನಿಸಲಾಯಿತು. ನಾಡ್ತಿಲ ಕೊಪ್ಪ ಅಂಗನವಾಡಿ ಮತ್ತು ಕೊಂಡಾಡಿಕೊಪ್ಪ ಶಾಲಾ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.

ಬಹುಮಾನ ವಿತರಣೆ

ಬೆಳಗ್ಗೆ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ ಧ್ವಜಾರೋಹಣ ನೆರವೇರಿಸಿದರು. ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಅಧ್ಯಕ್ಷ ಮಾಧವ ಪೂಜಾರಿ ಕಯ್ಯಪೆ ಬಹುಮಾನ ವಿತರಣೆ ಮಾಡಿದರು. ನಿವೃತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ ಶರವೂರು, ಉಪಾಧ್ಯಕ್ಷ ಹರೀಶ್ ಏಂತಡ್ಕ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಮೋಕ್ಷಿತಾ, ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ, ಶಾಲಾ ನಾಯಕ ರಕ್ಷಣ್ ಕೆ, ಮುಖ್ಯಶಿಕ್ಷಕ ಜಯಂತ್ ವೈ. ಉಪಸ್ಥಿತರಿದ್ದರು. ದಿವ್ಯಾ ವಿ. ವಂದಿಸಿದರು. ಸೌಮ್ಯಾ ನಿರೂಪಿಸಿದರು.