ರಟ್ಟಿಹಳ್ಳಿ: ವಿಯಟ್ನಾಂ ದೇಶದ ಓಚಿ ಮಿನಾ ಸಿಟಿಯಲ್ಲಿ ಶನಿವಾರ ಜರುಗಿದ 2ನೇ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ತಾಲೂಕಿನ ಮಕರಿ ಗ್ರಾಮದ ಕೋಮಲಾ ಚೆನ್ನಗೌಡ ಬಸವನಾಳ ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದು ಜಾಗತಿಕ ಯೋಗ ಶ್ರೇಷ್ಠ ಪ್ರಶಸ್ತಿ ಮತ್ತು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ.
ಕಳೆದ 8 ವರ್ಷಗಳಿಂದ ಯೋಗಾಭ್ಯಾಸದಲ್ಲಿ ನಿರಾತರಾಗಿರುವ ಕೋಮಲಾ 1ರಿಂದ 5ನೇ ತರಗತಿವರೆಗೆ ಮಕರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದು ಯೋಗಾ ಕೋಟಾದಲ್ಲಿ 6ನೇ ತರಗತಿಗೆ ಆಳ್ವಾಸ ಮೂಡಬಿದರಿ ಶಾಲೆಗೆ ಆಯ್ಕೆಯಾಗಿದ್ದು, ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ವಿದ್ಯಾರ್ಥಿನಿಗೆ ಹಾವೇರಿ ಪ್ರೇಮಕುಮಾರ ಮುದ್ದಿ ಮತ್ತು ಮೂಡಬಿದರಿಯ ನಿರ್ಮಲಾ ಕೊಡ್ಲಿಕರ್ ತರಬೇತಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿ ಕೋಮಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ರಟ್ಟಿಹಳ್ಳಿ ತಾಲೂಕು ಹಾವೇರಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.