ಕೊಳ್ಳೇಗಾಲ: ಡಾ.ವಿಷ್ಣು ಸಮಾಜ ಸೇವಾ ಟ್ರಸ್ಟ್ ಹಾಗೂ ಮೈಸೂರಿನ ಪ್ರಲಕ್ಷ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಜ.8 ರಂದು ಬೃಹತ್ ಆರೋಗ್ಯ, ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಜ.8ರ ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ನೇತ್ರ ತಜ್ಞರಿಂದ ಕಣ್ಣಿನ ಆರೋಗ್ಯದ ಕುರಿತು ಉಚಿತ ಸಲಹೆ ಸೂಚನೆಗಳನ್ನು ನೀಡಲಾಗುವುದು. ಕಣ್ಣಿನಪೊರೆ, ಮಾಲುಗಣ್ಣು, ಕಪ್ಪು ಗುಡ್ಡೆಯಲ್ಲಿ ಬಿಳಿ ಕಲೆ ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳನ್ನು ಪರೀಕ್ಷಿಸಲಾಗುವುದು. ಶಸ್ತ್ರಚಿಕಿತ್ಸೆಗೆ ಅರ್ಹರಾದವರನ್ನು ಮೈಸೂರಿನ ಪ್ರಲಕ್ಷ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುವುದು. ರೋಗಿಗಳಿಗೆ ಉಚಿತವಾಗಿ ಸಾರಿಗೆ, ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಪಟ್ಟಣದ ಸುತ್ತಮುತ್ತಲಿನ ನಾಗರಿಕರು ಶಿಬಿರದ ಸದುಪಯೋಗವನ್ನು ಪಡೆಯುವಂತೆ ಪ್ರಕಟಣೆ ತಿಳಿಸಿದೆ.