ಜಿಲ್ಲೆ

ಕಟಾವಿಗೆ ಬಂದಿದ್ದ ಕಬ್ಬು ಭಸ್ಮ

reportermys

ಕೊಳ್ಳೇಗಾಲ: ತಾಲೂಕಿನ ಹಿತ್ತಲದೊಡ್ಡಿ ಗ್ರಾಮದ ಜಮೀನಿನಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಕರಕಲಾಗಿದೆ.

ನಾಗರಾಜು ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ 16 ತಿಂಗಳ ಕಬ್ಬು ಸುಟ್ಟು ಹೋಗಿದೆ. ಕಬ್ಬಿನ ಬೆಳೆ ಉರಿಯುತ್ತಿರುವುದನ್ನು ಕಂಡು ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನಂದಿಸಲು ಯತ್ನಿಸಿದರೂ ಅಷ್ಟರಲ್ಲಿ ಬಹುತೇಕ ಬೆಳೆ ಸುಟ್ಟು ಹೋಗಿದೆ. ಸೆಸ್ಕ್‌ಗೆ ದೂರು ನೀಡಿದ ಬಳಿಕ ಇಂಜಿನಿಯರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಒತ್ತಾಯ: ಜಮೀನು ಮಧ್ಯೆ ಅಳವಡಿಸಿರುವ ವಿದ್ಯುತ್ ಪರಿವರ್ತಕ(ಟಿಸಿ)ದಿಂದ ಕಬ್ಬು ಬೆಳೆ ನಾಶವಾಗಿದೆ. ಕೂಡಲೇ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಜಮೀನು ಮಧ್ಯೆ ಅಳವಡಿಸಿರುವ ಟಿಸಿಯನ್ನು ಸ್ಥಳಾಂತರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.